ಲಕ್ನೋ:ಕೊರೋನಾ ವೈರಸ್ ಪಿಡುಗಿನಂತಹ ಗಂಭೀರ ಬಿಕ್ಕಟ್ಟಿನಲ್ಲಿ ದೇಶ ಸಿಲುಕಿಕೊಂಡಿರುವಾಗಲೂ ಕಾಂಗ್ರೆಸ್ ಹೀನ ರಾಜಕೀಯ ಮಾಡುತ್ತಿರುವುದಕ್ಕೆ ಉತ್ತರಪ್ರದೇಶದಲ್ಲಿ ವಲಸಿಗರ ಹೆಸರಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ರಾಜಕೀಯವೇ ಸಾಕ್ಷಿ. ಇದು ಅತ್ಯಂತ ವಿಷಾದನೀಯ . ದೇಶದಲ್ಲಿ ವಿಪಕ್ಷ ಈ ಮಟ್ಟಕ್ಕೆ ಹಿಂದೆಂದೂ ಇಳಿದಿರಲಿಲ್ಲ ಎಂಬುದಾಗಿ ಉತ್ತರಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮ ಹೇಳಿದ್ದಾರೆ.
ವಲಸಿಗರನ್ನು ಕರೆತರಲು 1000 ಬಸ್ಸುಗಳನ್ನು ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ೧೦೪೯ವಾಹನಗಳ ಪಟ್ಟಿ ನೀಡಿತ್ತು. ಇದರಲ್ಲಿ ೪೬೦ವಾಹನಗಳವಿವರವೇ ನಕಲಿಯಾಗಿತ್ತು.ಅವ ತೀರಿದ ವಾಹನಗಳ ಸಂಖ್ಯೆ ೨೯೭ ಆಗಿದ್ದವು. ೯೮ ವಾಹನಗಳು ತ್ರಿಚಕ್ರ, ಕಾರು, ಟ್ರಕ್ಕು, ಅಂಬ್ಯುಲೆನ್ಸ್ಗಳಾಗಿದ್ದವು.ಕಾಂಗ್ರೆಸ್ ವಲಸಿಗರ ಬದುಕಿನಲ್ಲಿ ಚೆಲ್ಲಾಟವಾಡಲು ಹೊರಟಿದೆಯೇ?ಎಂಬುದಾಗಿ ಶರ್ಮ ಪ್ರಶ್ನಿಸಿದರು.ಅಲ್ಲದೆ ಅನೇಕ ಬಸ್ಸುಗಳು ರಾಜಸ್ತಾನ ಸಾರಿಗೆ ಇಲಾಖೆಯ ಬಸ್ಸುಗಳಾಗಿದ್ದು, ಸರಕಾರವೊಂದರ ವಾಹನಗಳನ್ನು ರಾಜಕೀಯ ಪಕ್ಷವೊಂದು ಸ್ವಂತದ ನೆಲೆಯಲ್ಲಿ ಬಳಸಿಕೊಳ್ಳಲು ಹೇಗೆ ತಾನೇ ಸಾಧ್ಯ ಎಂಬುದಾಗಿಯೂ ಅವರು ಪ್ರಶ್ನಿಸಿದರು.
ಈ ನಡುವೆ ಕಾಂಗ್ರೆಸ್ ನೀಡಿದ್ದ ಬಸ್ಸುಗಳ ಪಟ್ಟಿಯಲ್ಲಿರುವ ಅನೇಕ ವಾಹನಗಳನ್ನು ರಸ್ತೆಗಿಳಿಸಲು ಅಸಾಧ್ಯವಾಗಿದ್ದು, ಅವು ಅವ ತೀರಿದ ವಾಹನಗಳಾಗಿವೆ ಎಂಬುದಾಗಿ ಉತ್ತರಪ್ರದೇಶ ಸರಕಾರದ ವಕ್ತಾರರು ತಿಳಿಸಿದ್ದಾರೆ.