Tuesday, July 5, 2022

Latest Posts

ಕಾಂಗ್ರೆಸ್ ಆಡಳಿತದ ಪಾಪದ ಫಲ, ಪುಂಡ ಪೋಕರಿಗಳ ಹಾವಳಿಗೆ ಕಾರಣ: ಗೋವಿಂದ ಕಾರಜೋಳ

ಕೊಪ್ಪಳ:ಕಾಂಗ್ರೆಸ್ ಆಡಳಿತದ ಪಾಪದ ಫಲವಾಗಿ ಇಂದು ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿ ಗಲ್ಲಿ ಗಲ್ಲಿಯಲ್ಲಿ ಮೆರೆಯುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 56 ವರ್ಷ ಕಾಂಗ್ರೆಸ್ ನವರು ದೇಶದ ಆಡಳಿತ ಮಾಡಿದರೂ ಯಾರ ರಕ್ಷಣೆ ಮಾಡಲಿಲ್ಲ. ಸಂವಿಧಾನದ ಆಶಯದಂತೆ ದಿನ- ದಲಿತರ ಉದ್ದಾರವಂತೂ ಅವರ ಕನಸು ಮನಸಿನಲ್ಲೂ ಕೂಡ ಮಾಡಲಿಲ್ಲ. ಕಾಂಗ್ರೆಸ್ ಉತ್ತಮ ಆಡಳಿತ ನೀಡಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಸಮಸ್ಯೆಯೇ ಇರಬಾರದಿತ್ತು. ಅವರು ಉತ್ತಮ ಆಡಳಿತ ನೀಡದೇ ಇರುವುದು ದೇಶ ಹಾಗೂ ರಾಜ್ಯದ ಸಮಸ್ಯೆ ಆಗೆ ಉಳಿದಿವೆ. ಕಾಂಗ್ರೆಸ್ ಅವರು ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ ವಿನಃ ದಲಿತರ ಉದ್ದಾರವಂತ ಮಾಡಲಿಲ್ಲ. ಅವರ ಆಡಳಿತದಲ್ಲಿ ಪುಂಡ ಪೋಕರರನ್ನು ಲಾಲನೆ ಪೋಷಣೆ ಮಾಡಿ ಬೆಳಿಸಿದ್ದಾರೇ ವಿನಃ ಅವರಿಗೆ ಕಾನೂನಿನ ಭಯ ಹುಟ್ಟಿಸಲಿಲ್ಲ. ರಾಜ್ಯದಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿ ಗಲ್ಲಿ ಗಲ್ಲಿಯಲ್ಲಿ ಬೆಳೆದಿದ್ದಾರೆ. ಇದರಿಂದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ನಡೆಸಿದ್ದಾರೆ. ಹೀಗಾಗಿ ಸಾಮಾನ್ಯ ಜನರನ್ನು ಅಷ್ಟೇ ಅಲ್ಲದೆ ಪುಂಡ ಪೋಕರಿಗಳು ಶಾಸಕರನ್ನೂ ಬಿಡುತ್ತಿಲ್ಲ. ಅವರ ಮನೆಗೆ ಬೆಂಕಿ ಹಚ್ಚಿ ಧ್ವಂಸ ಮಾಡಲು ಮುಂದಾಗಿದ್ದಾರೆ. ಪೋಕರಿಗಳಿಗೆ ಕಾನೂನಿನ ಭಯವೂ ಇಲ್ಲದೆ ಪೊಲೀಸ್ ಠಾಣೆಯಲ್ಲಿಯೂ ಕೂಡ ಧ್ವಂಸ ಮಾಡಿದ್ದಾರೆ. ಈ ಮಟ್ಟಕ್ಕೆ ಪುಂಡರನ್ನು ಕಾಂಗ್ರೆಸ್ ನವರು ಬೆಳೆಸಿದ್ದಾರೆ. ಇದರಿಂದ ನಮ್ಮ ಸರಕಾರ ಇದನ್ನು ಸುಮ್ಮನೆ ಬೀಡುವುದಿಲ್ಲ. ಅದಕ್ಕೆ ಸಂಬಂದಿಸಿದವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ ತಪ್ಪಿತಸ್ಥರು ಯಾರೆ ಆದರೂ ಕೂಡ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
ದಲಿತರ ಪಕ್ಷ ಎಂದು ಹೇಳುವ ಕಾಂಗ್ರೆಸ್ ದಲಿತ ಶಾಸಕನ ಮನೆಯ ಮೇಲೆ ದಾಳಿಯಾದರೂ ಕೂಡ ರಕ್ಷಣೆಗೆ ಮುಂದಾಗದ ಕಾಂಗ್ರಸ್ ನವರು ಸಾಮನ್ಯ ಜನರನ್ನು ಹಾಗೂ ದಲಿತರ ರಕ್ಷಣೆ ಹೇಗೆ ಮಾಡಬಲ್ಲರು ಎಂಬುದು ಜನರಿಗೆ ಅ‌ರ್ಥವಾಗಿದೆ. ಇದನ್ನು ಮರೆ ಮಾಚುವ ಉದ್ದೇಶದಿಂದ ಕಾಂಗ್ರೆಸ್ ವಿನಾಃಕಾರಣ ರಾಜಕಾರಣ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss