ಹೊಸದಿಲ್ಲಿ: ಕಾಂಗ್ರೆಸ್ ವಕ್ತಾರೆ ಸ್ಥಾನದಿಂದ ಕೆಳಗಿಳಿದ ನಟಿ ಖುಷ್ಬೂ ಸುಂದರ್. ಖುಷ್ಬೂ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ಖುಷ್ಬೂ ಸುಂದರ್ ಅವರು ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುವ ಅವರಂತಹ ಜನರನ್ನು ಪಕ್ಷದೊಳಗೆ ಉನ್ನತ ಮಟ್ಟದಲ್ಲಿ ಕುಳಿತಿರುವ ಕೆಲವರಿಂದ ನಿಗ್ರಹಿಸಲಾಗುತ್ತಿದೆ ಎಂದು ಬರೆದಿದ್ದಾರೆ.
ಸುಮಾರು ಆರು ವರ್ಷಗಳಿಂದ ಕಾಂಗ್ರೆಸ್ ಜೊತೆಗಿರುವ ಖುಷ್ಬೂ ಅವರನ್ನು ಐಎಸಿಸಿ ವಕ್ತಾರೆ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಖುಷ್ಬೂ ಸುಂದರ್ ಅವರು ಜುಲೈನಲ್ಲಿ ಕೇಂದ್ರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬೆಂಬಲಿಸಿದಾಗ ಕಾಂಗ್ರೆಸ್ ಜೊತೆಗಿನ ಬಿರುಕಿನ ವದಂತಿಗಳನ್ನು ಹುಟ್ಟುಹಾಕಲಾಗಿತ್ತು. ಪಕ್ಷದ ಮುಖಂಡ ರಾಹುಲ್ ಗಾಂಧಿ ಭಿನ್ನಾಭಿಪ್ರಾಯಗಳಿಗೆ ಕ್ಷಮೆಯಾಚಿಸುವಂತೆ ಅವರು ಟ್ವೀಟ್ ಮಾಡಿದ್ದರು.