Wednesday, June 29, 2022

Latest Posts

ಕಾಂಗ್ರೆಸ್ ನಾಯಕರಿಗೆ ಸಿ.ಡಿ. ಹಿಡಿದುಕೊಂಡು ಓಡಾಡುವುದು ಬಿಟ್ಟು ಬೇರೆ ಕೆಲಸವಿಲ್ಲ: ಸಚಿವ ಎಸ್.ಟಿ.ಸೋಮಶೇಖರ್ ಲೇವಡಿ

ಹೊಸದಿಗಂತ ವರದಿ,ಮೈಸೂರು:

ಯಾವುದೇ ವಿಷಯವಾದರೂ ಕಾಂಗ್ರೆಸ್ ಪಕ್ಷ ಸಿ.ಡಿ. ಪ್ರಸ್ತಾಪ ಮಾಡುತ್ತೆ. ಆ ಪಕ್ಷದ ನಾಯಕರು ಸಿ.ಡಿ. ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಲೇವಡಿ ಮಾಡಿದರು.

ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವಿಚಾರದಲ್ಲಿಯೂ ಸುಮ್ಮನೆ ರಾಜಕಾರಣ ಮಾಡಿಕೊಂಡು ಬರುವುದೇ ಕಾಂಗ್ರೆಸ್ ಕೆಲಸ. ಬಿಜೆಪಿಯದ್ದು ಕೇವಲ ಅಭಿವೃದ್ದಿ ಕೆಲಸ ಎಂದು ಟಾಂಗ್ ನೀಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲೂ ಕಾಂಗ್ರೆಸ್‌ನವರು ರಾಜಕೀಯ ಬೆರಸುತ್ತಿದ್ದಾರೆ. ಸಂತೋಷ್ ಒಳ್ಳೆಯ ಹುಡುಗ. ಆತ ರಾಜಕೀಯದಲ್ಲಿ ಬೆಳೆಯುತ್ತಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿ ಸದ್ಯ ಹುಷಾರಾಗಿ ಮನೆಗೆ ಬಂದಿದ್ದಾನೆ. ಇದೀಗ ಎಲ್ಲಾ ವಿಚಾರ ಮುಗಿದಿದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಎಲ್ಲದರಲ್ಲೂ ರಾಜಕಾರಣ ಮಾಡುತ್ತದೆ ಎಂದು ಕಿಡಿಕಾರಿದರು.

ಬಾಂಬೆ ಮಿತ್ರ ಮಂಡಳಿಯಿoದ ಔತಣಕೂಟ ನಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮಲ್ಲಿ ಯಾವುದೇ ಬಾಂಬೆ, ಡೆಲ್ಲಿ, ಬೆಂಗಳೂರು ಎಂಬ ತಂಡ ಇಲ್ಲ ಎಂದರು. ನಮ್ಮದು ಬಿಜೆಪಿ ಟೀಂ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss