Thursday, August 18, 2022

Latest Posts

ಕಾಂಗ್ರೆಸ್ ನಾಯಕರ ಒತ್ತಡಗಳಿಗೆ ಮಣಿಯದೆ ಮೈಸೂರಿನಲ್ಲಿ ವಿವೇಕಾನಂದ ಸ್ಮಾರಕ ನಿರ್ಮಿಸಿ: ಬಿಜೆಪಿ ವಕ್ತಾರ ಡಾ.ಕೆ.ವಸಂತ 

ಮೈಸೂರು: ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಯಾವುದೇ ಒತ್ತಡಗಳಿಗೆ ಜಿಲ್ಲಾಡಳಿತ ಮಣಿಯದೆ, ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸದಸ್ಯ ಡಾ.ಕೆ.ವಸಂತ್ ಕುಮಾರ್ ಆಗ್ರಹಿಸಿದ್ದಾರೆ.
ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೊ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸುವ ಮೊದಲು ಭಾರತದಾದ್ಯಂತ ಪರ್ಯಾಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿ, ಅಂದಿನ ಮೈಸೂರು ರಾಜರ ಜೊತೆ ಮಾತುಕತೆಯನ್ನು ನಡೆಸಿ ಹಲವು ವಿಚಾರಗಳಿಗೆ ಸಂಬoಧಿಸಿದoತೆ ಮಾರ್ಗದರ್ಶನ ಮಾಡುವುದರ ಜೊತೆಗೆ ಉಪನ್ಯಾಸಗಳು ಹಾಗೂ ಚರ್ಚೆಯನ್ನು ಮೈಸೂರು ಜನರೊಟ್ಟಿಗೆ ನಡೆಸಿದ್ದು ಅವಿಸ್ವರಣಿಯ ಸಂಗತಿ .ಅವರು ತಂಗಿದ್ದ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣ ಆಗಬೇಕೆಂದು ಅಂದಿನ ರಾಜ್ಯ ಸರ್ಕಾರ ಈ ಜಾಗವನ್ನು ರಾಮಕೃಷ್ಣ ಆಶ್ರಮದವರಿಗೆ ನೀಡಿ, ಆ ಜಾಗದಲ್ಲಿ ವಿವೇಕ ಸ್ಮಾರಕ ಆಗಬೇಕೆಂದು ಆಶಿಸಿದ್ದರು .
ಸ್ವಾಮಿ ವಿವೇಕಾನಂದರ ೧೫೦ ನೇ ಜಯಂತಿ ಯ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಅವರು ಮೊದಲು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ೫ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದರು. ಆದರೆ ಅದೇ ಕಾಂಗ್ರೆಸ್ ನ ನಾಯಕರಾದಂತಹ ಸಿದ್ದ ರಾಮಯ್ಯನವರು, ಸ್ಮಾರಕ ನಿರ್ಮಾಣಕ್ಕೆ ವಿರೋಧವನ್ನು ವ್ಯಕ್ತ ಪಡಿಸಿದ್ದು ದುರಂತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಎಡಬಿಡಂಗಿ ಬುದ್ಧಿಜೀವಿಗಳು ಇಲ್ಲಾ ಸಲ್ಲದ ವಿಷಯವನ್ನು ತಂದು ದಾಖಲಾತಿಯೆ ಕಡಿಮೆ ಇರುವ ಕನ್ನಡ ಶಾಲೆಯನ್ನು ಮುಚ್ಚುತ್ತಿದ್ದಾರೆಂದು ಸುಳ್ಳು ಹೇಳಿಕೆಗಳನ್ನು ನೀಡಿ ಹೋರಾಟ ಮಾಡಿದ್ದು ನಾಚಿಕೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ಇಡೀ ಜಗತ್ತಿಗೆ ಭಾರತದ ಧರ್ಮ, ಆಚಾರ,ವಿಚಾರ ,ಸಂಸ್ಕೃತಿ , ಪರಂಪರೆಯನ್ನು ತಿಳಿಸಿ ಕೊಡುವುದರ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಂತನ ಒಂದು ಸ್ಮಾರಕ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿರುವುದು ವಿವೇಕಾನಂದ ನಂದರಿಗೆ ಅಪಮಾನ ಮಾಡಿದಂತೆ. ಇಂತಹ ಶ್ರೇಷ್ಠ ಸಂತನಿಗೆ ಕನಿಷ್ಟ ಒಂದು ಸ್ಮಾರಕ ನಿರ್ಮಿಸಲು ಅವಕಾಶ ಮಾಡುಕೊಡದ ಕಾಂಗ್ರೆಸ್ ದೇಶದ ಮಹಾಪುರುಷರಿಗೆ ಯಾವ ಮರ್ಯಾದೆ ಗೌರವ ನಿಡುತ್ತಿದೆ ಎಂಬುದನ್ನು ಸಮಾಜ ತಿಳಿದಿದೆ ಎಂದಿದ್ದಾರೆ.
ಭಾರತದ ಸಾಂಸ್ಕೃತಿಕ ರಾಯಭಾರಿ ಎಂದು ಕರೆಸಿ ಕೊಂಡ ವಿವೇಕಾನಂದರು ಇವರ ಪ್ರೇರಣೆಯಿಂದ ಸಾವಿರಾರು ಯುವಕರು ಸ್ವಾತಂತ್ರ÷್ಯ ಹೋರಾಟದಲ್ಲಿ ಧುಮುಕಿ ತಮ್ಮ ತನು ಮನ ಅರ್ಪಣೆ ಮೂಲಕ ದೇಶಕ್ಕೆ ಸ್ವಾತಂತ್ರ÷್ಯ ತಂದು ಕೊಟ್ಟರು ,ತನ್ನ ಮಾರ್ಗ ದರ್ಶನದ ಮೂಲಕ ಅನೇಕ ರಾಜ ಮಹರಾಜರು ,ಪಂಡಿತ ಪಾಮರರು ,ಸಂತರು ಸ್ವಾಮೀಜಿಗಳು ,ಉದ್ಯಮಿಗಳುನಮ್ಮ ದೇಶದ ಅಬಿವೃದ್ದಿಗೆ ತೊಡಗಿಸಿಕೊಳ್ಳುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು. ಇಂತಹ ವ್ಯಕ್ತಿಯ ಸ್ಮಾರಕವನ್ನು ವಿರೋಧ ಮಾಡುವುದು ಭಾರತದ ಅಸ್ಮೀತೆಯನ್ನು ವಿರೋಧ ಮಾಡಿದಂತೆ. ಯಾರೋ ಕೆಲಸಕ್ಕೆ ಬಾರದ ವ್ಯಕ್ತಿಗಳ ಸ್ಮಾರಕವನ್ನು ಕಾಂಗ್ರೆಸ್ ಮಾಡುತ್ತದೆ. ಆದರೆ ಒಬ್ಬ ಮಹಾಪುರುಷನಿಗೆ ವಿರೋಧ ವನ್ನು ವ್ಯಕ್ತಪಡಿಸುತ್ತದೆ. ಇನ್ನಾದರು ಸಿದ್ದರಾಮಯ್ಯನವರು ವಿರೋಧ ವನ್ನು ಮಾಡುವುದನ್ನು ಬಿಟ್ಟು ಸ್ಮಾರಕ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಿ ಎಂದು ವಸಂತ್ ಕುಮಾರ್ ಹೇಳಿದ್ದಾರೆ.
ಕೆಲವು ಎಡಬಿಡಂಗಿ ಸ್ವ ಘೋಷಿತ ಬುದ್ದಿ ಜೀವಿಗಳು ವಿರೋಧ ಮಾಡುವುದೇ ಕಾಯಕ ವನ್ನಾಗಿ ಮಾಡಿಕೊಂಡಿದ್ದಾರೆ. ಇವರಿಗೆಲ್ಲಾ ಪ್ರಚಾರದ ಹುಚ್ಚು. ಏನಾದರು ಸರಿ ಒಳ್ಳೆಯದನ್ನು ವಿರೋಧ ಮಾಡಬೇಕು ಎಂಬ ದರಿದ್ರ ಮನಸ್ಥಿತಿ , ಈ ವಿರೋಧಿಗಳ ಯಾವ ಮಕ್ಕಳು ಕೂಡಾ ಕನ್ನಡ ಸರ್ಕಾರಿ ಶಾಲೆಯಲ್ಲಿ ಓದುತ್ತಿಲ್ಲಾ ಮತ್ತು ಓದಿಸುತ್ತಿಲ್ಲಾ. ಆದರೆ ಕನ್ನಡ ಭಾಷೆ ,ಶಾಲೆ ಉಳಿಸುವ ತುತ್ತೂರಿ ಊದುತ್ತಾರೆ. ಬೇರೆಯವರು ಹಾಳಗಲಿ ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಲಿ ಎಂಬ ಸೋಗಲಾಡಿ ಬುದ್ದಿಜೀವಿಗಳಿಗೆ ಸೋಪ್ಪು ಹಾಕದೆ ಸರ್ಕಾರ ತತ್ಕ÷್ಷಣವೇ ಈ ಸಮಸ್ಯೆಯನ್ನು ಬಗೆಹರಿಸಿ ಸ್ಮಾರಕ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸ ಬೇಕೆಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!