ಹಾವೇರಿ: ರೈತಪರವಾದ ಮಸೂದೆಗಳ ವಿರುದ್ಧ ಕಾಂಗ್ರೆಸ್ ರೈತರನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಹೀನ ರಾಜಕಾರಣ ಮಾಡ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಭೂಮಿ ಕಾಯ್ದೆ, ಎಂಪಿಎಂಸಿ ಕಾಯ್ದೆಗಳ ಜಾರಿ ಬಗ್ಗೆ ಕಾಂಗ್ರೆಸ್ ಲೋಕಸಭಾ ಚುನಾವಣೆ ವೇಳೆ ತನ್ನ ಪ್ರನಾಳಿಕೆಯಲ್ಲೇ ಹೇಳಿತ್ತು ಹೀಗಿರುವಾಗ ಈಗ ಈ ಕಾಯ್ದೆಗಳು ಜಾರಿಗೆ ಬಂದರೆ ಬಿಜೆಪಿಗೆ ಲಾಭ ಆಗುತ್ತೆ ಅಂತಾ ರೈತರನ್ನ ದಾರಿ ತಪ್ಪಿಸೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ರೈತರ ಪರವಾಗಿ ತನ್ನ ನಿಲುವನ್ನು ತೋರಿಸದೇ ದಲ್ಲಾಳಿಗಳ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಕಾಂಗ್ರೆಸ್ ನಿನ್ನೆ ರೈತ ವಿರೋಧಿ ನಿರ್ಧಾರ ತೆಗೆದುಕೊಂಡಿದೆ. ನಿನ್ನೆಯ ಹೋರಾಟದ ಮೂಲಕ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದಾಗ ಬೆಂಕಿ ಹಚ್ಚೋ ಕೆಲಸ ಮಾಡುತ್ತೆ.
ಹಿಂದೆಯೂ ಮಾಡಿದೆ, ಈಗಲೂ ಮಾಡ್ತಿದೆ ಎಂದು ಹರಿಹಾಯ್ದರು.
ರೈತರು ಬೆಳೆದ ವಸ್ತುಗಳಿಗೆ ರೈತರೇ ದರ ನಿಗದಿ ಮಾಡುವಂತಾಗಬೇಕೆಂಬ ಕಾರಣದಿಂದ ಕೇಂದ್ರ ಸರ್ಕಾರ ಎಂಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದಯೇ ವಿನಃ ನೂತನ ಕಾಯ್ದೆಯನ್ನು ಜಾರಿಗೆ ತಂದಿಲ್ಲ ಎನ್ನುವುದು ಇಲ್ಲಿ ಮುಖ್ಯವಾದುದು. ರೈತರ ಬಳಿಗೆ ದಲ್ಲಾಳಿಗಳು ಹೋಗುವುದರಿಂದ ಮುಂದಿನ ದಿನಗಳಲ್ಲಿ ರೈತರೇ ದೇವರಾಗುತ್ತಾರೆ. ಇಷ್ಟು ದಿನಸ ರೈತರು ದಲ್ಲಾಳಿಗಳನ್ನು ಹುಡಿಕೊಂಡು ಹೋಗುವಂತಿತ್ತು ಆದರೆ ಈ ಕಾಯ್ದೆ ತಿದ್ದು ಪಡಿಯಿಂದ ದಲ್ಲಾಳಿಗಳೇ ರೈತರು ಹುಡುಕಿಕೊಂಡು ಹೋಗುವಂತಾಗುತ್ತದೆ. ಎನ್ನುವುದನ್ನು ರೈತರು ಅರಿತುಕೋಂಡಿರುವುದುರಿಂದ ನಿನ್ನೆ ನಡೆದ ಬಂದ್ಗೆ ರೈತರು ಬೆಂಬಲ ವ್ಯಕ್ತಪಡಿಸದಿರುವುದನ್ನು ಕಾಣಬಹುದು ಎಂದರು.
>> ಸಿಎಂ ಬದಲಾವಣೆ ವ್ಯವಸ್ಥೆ ಇಲ್ಲವೇ ಇಲ್ಲ. ಈ ಬಗ್ಗೆ ಎಲ್ಲಿಯೂ ಚರ್ಚೆಗಳು ನಡೆದಿಲ್ಲ, ಯಾರೂ ಅದನ್ನ ಹೇಳಿಲ್ಲ.
ಮುಂದಿನ ಮೂರು ವರ್ಷದ ಅವಧಿಯಲ್ಲಿಯೂ ಯಡಿಯೂರಪ್ಪ ಅವರೆ ಸಿಎಂ ಆಗಿರ್ತಾರೆ ಎಂದು ಸ್ಪಷ್ಟಪಡಿಸಿದರು.
ದಿವಂಗತ ಸಂಸದ ಸುರೇಶ ಅಂಗಡಿಯವರನ್ನು ಸಿಎಂ ಮಾಡೋ ಸಭೆ ವಿಚಾರ. ಸುರೇಶ ಅಂಗಡಿ ಮತ್ತು ನಾನು ಬಹಳ ಆತ್ಮೀಯರು. ಅವರು ಏನೇ ಇದ್ರೂ ನನಗೆ ಹೇಳುತ್ತಿದ್ದರು. ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಸೂಕ್ತ ಕಾಲಘಟ್ಟದಲ್ಲಿ ಅವರು ತೀರ್ಮಾನ ತೆಗೆದುಕೊಳ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣಕುಮಾರಜಿ, ಸಂಸದ ಭಗವಂತ ಕೂಬಾ, ಮಹೇಶ ತೆಂಗಿನಕಾಯಿ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಇತರರಿದ್ದರು.