Thursday, August 18, 2022

Latest Posts

ಕಾಂಗ್ರೆಸ್ ನ ಅಧೋಗತಿ ಆರಂಭ: ಸಚಿವ ಜಗದೀಶ ಶೆಟ್ಟರ್ ವಾಗ್ದಾಳಿ

ಹೊಸ ದಿಗಂತ ವರದಿ, ಧಾರವಾಡ:

ಕಾಂಗ್ರೆಸ್ ಅಧೋಗತಿ ಆರಂಭವಾಗಿದೆ. ಹೀಗಾಗಿ ಸಿಬಿಐ, ಇಡಿ ದಾಳಿ ಸೇರಿ ಈಗ ವಿನಯ ಬಂಧನ ಪ್ರಕರಣ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಬೃಹತ್-ಮಧ್ಯಮ ‌ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅನ್ಯಾಯ ಆಗಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಸಿಬಿಐ ಹಾಗೂ ಇಡಿ ಇಲಾಖೆ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಜನಾರ್ದನ ರೆಡ್ಡಿ ಬಂಧನವಾಗಿರಲ್ಲವೇ? ಅವರನ್ನು ಜೈಲಿನಲ್ಲಿ ಇಡಲ್ಲಿಕವೇ? ಆಗ ಯುಪಿಎ ಸರ್ಕಾರವೇ ಇತ್ತಲ್ಲವೇ? ಆಗ ಅವರು ಮಾಡಿದ್ದಾದರೂ ಏನು? ಎಂದು ತೀರುಗೇಟು ನೀಡಿದರು.
ಏಳು ದಶಕಗಳ ಕಾಲ ಕಾಂಗ್ರೆಸ್ ದೇಶ ಆಳಿದೆ. ಅವರು ಎಲ್ಲವೂ ನಡೆಯುತ್ತದೆಂಬ ವಿವಮಚಾರ ಈಗ ಬುಡಮೇಲಾಗಿದೆ. ಆದರೆ, ಇವತ್ತು ತನಿಖೆ ನಡೆಯುತ್ತದೆ. ತಪ್ಪು ಮಾಡದಿದ್ದರೆ, ಭಯ ಪಡುವ ಅಗತ್ಯವೇ ಇಲ್ಲ ಎಂದು ಹೇಳಿದರು.
ವಿನಯ್ ಗೆ ಸ್ವಾಮೀಜಿ ಬೆಂಬಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂಥ ಪ್ರಕರಣಗಳನ್ನು ಧರ್ಮಕ್ಕೆ ಬಳಸಬಾರದು. ಹಾಗೆ ಮಾಡುವುದು ತಪ್ಪು. ಸಿಬಿಐ ತಪ್ಪು ಮಾಡಿದರೆ, ಕೋರ್ಟ್ ನಲ್ಲಿ ಹೋರಾಟ ಮಾಡಲಿ ಎಂದು ಹೇಳಿದರು.
ಕಾಂಗ್ರೆಸ್ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಸಿಬಿಐ ಹಾಗೂ ಇಡಿ ದಾಳಿ ಆದಾಗ ರಾಜಕೀಯ ಅಂತಾರೆ. ಸಿದ್ದರಾಮಯ್ಯ ಸಿಎಂ ಹುದ್ದೆ ನಿಭಾಯಿಸಿದವರು, ಯೋಚನೆ ಮಾಡಿ ಮಾತನಾಡಲಿ ಎಂದು ಸಲಹೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!