Thursday, August 11, 2022

Latest Posts

ಕಾಂಗ್ರೆಸ್ ಪಕ್ಷ ಮುನ್ನಡೆಸಲು ನಾಯಕರೇ ಇಲ್ಲ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ 

ಬಾಗಲಕೋಟೆ: ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವಂತಹ ನಾಯಕರು ಆ ಪಕ್ಷದಲ್ಲೇ ಇಲ್ಲದಂತಹ ಸ್ಥಿತಿ ಇದೆ.ಹೀಗಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಮೇಲಕ್ಕೇಳಲು ಸಾಧ್ಯವೇ ಇಲ್ಲವೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಇತ್ತೀಚೆಗೆ ಬದಾಮಿ ಮತಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಭವಿಷ್ಯ ಇಲ್ಲವೆಂದು ಟೀಕಿಸಿರುವುದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದರು.ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿಯವರನ್ನು ಹೊರತುಪಡಿಸಿದರೆ ಈಗ ಅಲ್ಲಿ ಯಾವುದೇ ನಾಯಕರು ಅಂತಹ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ.ಪಕ್ಷಕ್ಕೆ 100 ವರ್ಷದ ದಾಟಿದ ಮೇಲೆ ಆಯುಷ್ಯ ಮುಗಿದಂತೆ ಎಂದರು.
ಸ್ವತಂತ್ರ ಬರುವ ಮುಂಚೆಯೇ ಕಾಂಗ್ರೆಸ್ ಪಕ್ಷವನ್ನು ಹುಟ್ಟಿಹಾಕಲಾಗಿದೆ. ಮಹಾತ್ಮ ಗಾಂಧೀಜಿಯವರೇ ತಮ್ಮ ಪತ್ರಿಕೆಯ ಸಂಪಾದಕತ್ವದಲ್ಲಿ ಬರೆದಂತೆ ಸ್ವತಂತ್ರ ನಂತರ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ಇರಬಾರದು ಎಂದು ಹೇಳಿದ್ದಾರೆ ಎಂದು ತಿಳಿಸಿದರು. ದಲಿತ ಎನ್ನುವದರಿಂದ ವೈಯಕ್ತಿಕ ಧಕ್ಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾ ರವೇ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಎಂದು ಕರೆಯಬೇಕು ಎಂದು ಹೇಳಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ 18 ಸಾವಿರ ಕಿ.ಮೀ. ರಸ್ತೆಯನ್ನು ಮೇಲ್ದರ್ಜೆ ಗೆ ಏರಿಸಿ ರಾಜ್ಯ ಹೆದ್ದಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನನಗೆ ಉದ್ಯೋಗದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ. ತೊಗಲಾಗಿನ ಬಲ್ಲ ತಿಮ್ಮಣ್ಣ ಇದ್ದಂಗೆ ನಾನು ವ್ಯಾಪಾರ, ಉದ್ಯೋಗ, ವಹಿವಾಟಿನ ಬಗ್ಗೆ ಐಡಿಯಾವೇ ಇಲ್ಲವೆಂದು ಹೇಳಿದರು. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಬೀಳಗಿ ಶಾಸಕ ಮುರುಗೇಶ ನಿರಾಣಿ ಗುತ್ತಿಗೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಆ ವ್ಯಾಪಾರಕ್ಕೂ ನನಗೆ ಸಂಬಂಧ ಇಲ್ಲ. ತೊಗಲಾಗಿನ ಬಲ್ಲ ತಿಮ್ಮ ಣ್ಣ ಅಂತಾರಲ್ಲ ಹಳ್ಳಿಯಲ್ಲಿ ಹಾಗೆ ನಾನು ಅವರ ವ್ಯಾಪಾರ ಉದ್ಯೋಗದ ಬಗ್ಗೆ ನನಗೇನೂ ಗೊತ್ತಿಲ್ಲವೆಂದು ಹೇಳಿದರು.
ನಿರಾಣಿ ಅವರ ವ್ಯಾಪಾರ ಉದ್ಯೋಗದ ಬಗ್ಗೆ ನನಗೆ ಯಾವುದೂ ಗೊತ್ತಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಯಾರು ಹೆಚ್ಚು ಬೀಡ್ ಮಾಡುತ್ತಾರೋ ಅವರಿಗೆ ಕೊಡುತ್ತಾರೆ. ಇವತ್ತು ದೇಶದಲ್ಲಿ ಉದ್ಯಮ ಎನ್ನುವುದು ತೊಂದರೆಯಲ್ಲಿದೆ ಹಾಗೆ ಸಕ್ಕರೆ ಉದ್ಯಮವು ತೊಂದರೆಯಲ್ಲಿದೆ ಎಂದು ಕಾರ ಜೋಳ ಸಮರ್ಥಿ ಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ವೀರಣ್ಣ ಚರಂ ತಿಮಠ, ಸಂಸದ ಪಿ.ಸಿ .ಗದ್ದಿಗೌಡರ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss