Wednesday, August 17, 2022

Latest Posts

ಕಾಂಗ್ರೆಸ್ ಭಾಗ್ಯಗಳ ಮೂಲಕ ರಾಜ್ಯಕ್ಕೆ ದೌರ್ಭಾಗ್ಯ ತಂದಿತು: ಗೃಹಸಚಿವ ಬಸವರಾಜ ಬೊಮ್ಮಾಯಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಕಾಂಗ್ರೆಸ್ ಸರ್ಕಾರ ಕೇವಲ ಭಾಗ್ಯಗಳ ಘೋಷಣೆ ಮಾಡುವ ರಾಜ್ಯಕ್ಕೆ ದೌರ್ಭಾಗ್ಯ ತಂದಿತು. ಬಿ.ಎಸ್.ಯಡಿಯೂರಪ್ಪ ಬಂದ ಮೇಲೆ ಶಾಪ ವಿಮೋಚನೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನ ಸೇವಕ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇವಲ ಭಾಗ್ಯಗಳನ್ನು ಘೋಷಣೆ ಮಾಡಿತು. ಆದರೆ ಅವನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಇದರಿಂದಾಗಿ ರಾಜ್ಯದ ಜನತೆ ಸಂಕಷ್ಟ ಅನುಭವಿಸುವಂತಾಯಿತು. ಬಿಜೆಪಿ ಸರ್ಕಾರವು ಅತಿವೃಷ್ಠಿ, ಕೊರೋನಾದಂತಹ ಸಂಕಷ್ಟದ ಕಾಲದಲ್ಲೂ ಉತ್ತಮ ಕೆಲಸ ಮಾಡಿದೆ ಎಂದರು.
ಕೇಂದ್ರ ಸರ್ಕಾರವು ಕೃಷಿಗೆ ನೆರವು ನೀಡಲು ರೈತರ ಖಾತೆಗೆ ೬ ಸಾವಿರ ರೂ. ಹಾಕಿತು. ರಾಜ್ಯ ಬಿಜೆಪಿ ಸರ್ಕಾರ ಇದರ ಜೊತೆ ೪ ಸಾವಿರ ರೂ. ನೀಡುತ್ತಿದೆ. ಕೇಂದ್ರ ಸರ್ಕಾರ ಫಸಲ್ ಭಿಮಾ ಯೋಜನೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ಅನೇಕ ರೈತಪರ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರ ಗ್ರಾಮ ವಿಕಾಸ ಯೋಜನೆ ಘೋಷಣೆ ಮಾಡಿತು. ಆದರೆ ಅನುಷ್ಠಾನ ಮಾಡಲಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುಹೋಗಿದ್ದು, ರಿಪೇರಿಗೆ ಹಣ ಇಟ್ಟಿರಲಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಶಕ್ತಿ ಕಳೆದುಕೊಂಡು ಒಂಟಿ ಕಾಲಲ್ಲಿ ನಿಂತಿದೆ. ಊರುಗೋಲಾಗಬೇಕಿದ್ದ ಸಿದ್ರಾಮಯ್ಯ, ಡಿ.ಕೆ.ಶಿವಕುಮಾರ್ ಒಂದೊಂದು ದಿಕ್ಕಿನಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಯಾವತ್ತು ಕುಸಿದು ಬೀಳುತ್ತದೆ ಎಂದು ಹೇಳಲಾಗದು. ಗ್ರಾ.ಪಂ. ಚುನಾವಣೆಯೇ ಇದಕ್ಕೆ ಸಾಕ್ಷಿ. ಬಿಜೆಪಿ ಗ್ರಾಮೀಣ ಮಟ್ಟದಲ್ಲಿ ಬೇರು ಬಿಟ್ಟಿದೆ. ಹಾಗಾಗಿ ಯಾರೂ ಅದನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!