Wednesday, August 10, 2022

Latest Posts

ಕಾಂಗ್ರೆಸ್ ಮುಳಗುತ್ತಿರುವ ಹಡಗು: ಜಗದೀಶ ಶೆಟ್ಟರ್ ಲೇವಡಿ

ಹೊಸ ದಿಗಂತ ವರದಿ, ಕಲಬುರಗಿ:

ಕೇಂದ್ರದಲ್ಲಿ ನರೇಂದ್ರ ಮೋದಿ, ಹಾಗೂ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತದಿಂದ ಇಡೀ ದೇಶದಲ್ಲಿ ಕಾಂಗ್ರೆಸ್ ಅಧೋಗತಿಯ ಹಂತಕ್ಕೆ ತಲುಪಿದ್ದು, ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡುಗಾಗಿದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ ಹೇಳಿದ್ದಾರೆ.
ಅವರು ನಗರದ ನೂತನ ವಿದ್ಯಾಲಯದ ಒಳ ಆವರಣದಲ್ಲಿ ಆಯೋಜಿಸಿದ್ದ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಅಧಿಕಾರವಿಲ್ಲದೇ, ಹತಾಸೆಯ ಮಟ್ಟಕ್ಕೆ ತಲುಪಿದೆ. ವಿಳಾಸವಿರದ ಸ್ಥಳಕ್ಕೆ ಬಂದುಬಿಟ್ಟಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಎನ್ನವುದೇ ಇಲ್ಲ, ಡಿಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಒಳಜಗಳ ಜನರಿಗೆ ಬೇಸತ್ತಿ ಹೋಗಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಒಳಜಗಳದಿಂದಲೇ ಇಂದು ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದರು.
ಕಾಂಗ್ರೆಸ ನಲ್ಲಿ ಕಾರ್ಯಕರ್ತರ ಪಡೆಯ ಮಾತೇ ಇಲ್ಲ. ಬರೀ ನಾಯಕರ ಪಡೇಯೇ ತುಂಬಿಹೋಗಿದೆ. ಕೇಂದ್ರ ಸರ್ಕಾರದಲ್ಲಿ ಮನಮೋಹನ ಸಿಂಗ್ ಆಡಳಿತದಲ್ಲಿ ಸಾಕಷ್ಟು ಹಗರಣಗಳು ನಡೆದುಹೋಗಿವೆ. ಆದರೆ ಕೇಂದ್ರದಲ್ಲಿ ಮೊದಲ ಬಾರಿಗೆ ಹಾಗೂ ಎರಡನೇ ಬಾರಿಗೆ ಅಧಿಕಾರಿವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರದೇ ಆಡಳಿತವನ್ನು ನಡೆಸುತ್ತಿರುವ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಿಂದ ಏನೂ ಮಾಡಲು ಸಾಧ್ಯವಿಲ್ಲೆಂದರು. ಹೀಗಾಗಿ ಮುಂಬರುವ ದಿನಗಳಲ್ಲಿ ದೇಶದಿಂದ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವು ಪಾತಾಳಕ್ಕೆ ಹೋಗಿ ಬಿಳಲಿದೆ ಎಂದರು.

ರಾಹುಲ್ ಗೆ ಮೆಚ್ಯೂರಿಟಿ ಇಲ್ಲ
ನರೇಂದ್ರ ಮೋದಿ ವಿರುದ್ದ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅವರಿಗೆ ಮೆಚ್ಯೂರಿಟಿಯೇ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟನ್ನು ತರದ ನಾಯಕ. ದೇಶದಲ್ಲಿ ಒಗ್ಗಟ್ಟಾಗಲಿ, ದೇಶದ ಆಧಿತ್ಯವಾಗಲಿ ಹೇಗೆ ನಿಭಾಯಿಸಲು ಸಾಧ್ಯವೆಂದರು. ನರೇಂದ್ರ ಮೋದಿ ದೇಶಕ್ಕೆ ಒಳ್ಳೆಯ ಆಡಳಿಯ ನೀಡುವ ಮೂಲಕ ದೇಶವನ್ನು ವಿಶ್ವದಲ್ಲಿ ಅಗ್ರಸ್ಥಾನಕ್ಕೆ ಕೋಂಡುಯ್ಯುತ್ತಿದ್ದಾರೆ. ಹೀಗಾಗಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸಿಗುತ್ತಿದೆ ಎಂದರು.

ಇತಿಹಾಸದಲ್ಲಿ ಮೊದಲ ಬಾರಿಗೆ ಸಾಧನೆ
ಇಡೀ ದೇಶ, ರಾಜ್ಯ ಹಾಗೂ ಹಳ್ಳಿಗಳಲ್ಲಿ ಬದಲಾವಣೆ ಗಾಳಿ ಬಿಸುತ್ತಿದೆ. ಹೊಸ ಹುರುಪಿನೊಂದಿಗೆ ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡುತ್ತಿದೆ. ಮೊದಲ ಬಾರಿಗೆ ಐತಿಹಾಸಿಕ ಸಂಖ್ಯೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಗೆದ್ದಿದ್ದಾರೆ ಎಂದರು. ಈ ಬಾರಿ ಬಿಜೆಪಿ ಬೆಂಬಲಿತ 45,246 ಸದಸ್ಯರು ಜೊತೆಗೆ 3142 ಮೆಜ್ಯಾರಿಟಿ ಪಡೆಯುವ ಮೂಲಕ ಅತೀ ಹೆಚ್ಚು ಗ್ರಾಮ ಪಂಚಾಯತಿ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ ಎಂದರು. ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗ¼ನ್ನು ನೀಡಿದೆ, ಅದರ ಸದುಪಯೋಹ ಪಡೆದುಕೊಂಡು ನಿಮ್ಮ ಹಳ್ಳಿಗಳನ್ನು ವಿಕಾಸ ಮಾಡುವದರೊಂದಿಗೆ ನಿಮ್ಮ ಹಳ್ಳಿಗಳನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಬೇಕೆಂದರು.
ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ ಹಾಗೂ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರನ್ನು ಸಚಿವರು, ಸಂಸದರು ಹಾಗೂ ಶಾಸಕರು ಹೂವು ಸುರಿಯುದರ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು. ಸಮಾವೇಶದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಪ್ರಭು ಚವ್ಹಾಣ, ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಉಮೇಶ ಜಾಧವ, ಭಗವಂತ ಖೂಬಾ, ಬಿ.ಜಿ.ಪಾಟೀಲ, ದತ್ತಾತ್ರೇಯ ಪಾಟೀಲ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ, ಸುಭಾಷ ಗುತ್ತೇದಾರ, ಅವಿನಾಶ ಜಾಧವ, ಶಶೀಲ ನಮೋಶಿ, ಸುವರ್ಣ ಮಲಾಜೆ, ಶಶಿಕಲಾ ಟೆಂಗಳಿ, ಚಂದ್ರಕಾಂತ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss