ಕಾಂಗ್ರೆಸ್ ಶಾಸಕಿ ಅಮಾನತುಮಹಿಳಾ ಕಾಂಗ್ರೆಸ್ ನಿಂದ ಹೊರಬಂದ‌ ಮೇಲೆ ಪ್ರಿಯಾಂಕ ಗಾಂಧಿ ಮೇಲೆ ವಾಗ್ದಾಳಿ

0
917

ಲಕ್ನೊ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ರಾಯಬರೇಲಿ ಶಾಸಕಿ ಅದಿತಿ ಸಿಂಗ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದ್ದು ಇದೀಗ ಮಹಿಳಾ ವಿಭಾಗದಿಂದಲೂ ಗೇಟ್ ಪಾಸ್ ನೀಡಿದೆ.

ಎಲ್ಲಾ ವಾಟ್ಸಾಪ್ ಗ್ರೂಪ್ ಗಳಿಂದ ಹೊರ ಬಂದಿರುವ ರೆಬೆಲ್ ಶಾಸಕಿ ಅದಿತಿ ಸಿಂಗ್ ತಮ್ಮ ಟ್ವಿಟರ್ ನಲ್ಲಿ ಪ್ರಿಯಾಂಕ ಗಾಂಧಿ ವಿರುದ್ಧ ವಾಗ್ದಾನ ಕ್ಕಿಳಿದಿದ್ದಾರೆ. ಉತ್ತರ ಪ್ರದೇಶಕ್ಕೆ ಬಸ್ ಕಳುಹಿಸಿರುವ ವಿಚಾರವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅದಿತಿ ಸಿಂಗ್,ಇಂತಹ ಬಿಕ್ಕಟ್ಟಿನಲ್ಲಿ ಕಳಪೆ ರಾಜಕಾರಣ ಮಾಡುವ ಅವಶ್ಯಕತೆ ಏನಿತ್ತು? 1000 ಬಸ್ಸುಗಳ ಪಟ್ಟಿಯನ್ನು ನೀಡಿದ್ದು ಅದರಲ್ಲಿ ಅರ್ಧದಷ್ಟು ನಕಲಿ ಯಾಗಿವೆ. ಈ ರೀತಿಯ ಕ್ರೂರ ಜೋಕ್ ಯಾಕೆ ಮಾಡುತ್ತೀರಿ.ನಿಮ್ಮಲ್ಲಿ ನಿಜವಾಗಿಯೂ ಬಸ್ ಗಳು ಇರುತ್ತಿದ್ದರೆ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಕ್ಕೆ ಯಾಕೆ ಕಳುಹಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಕೋಟಾದಲ್ಲಿ ಸಾವಿರಾರು ಮಕ್ಕಳು ಸಿಲುಕಿಕೊಂಡಾಗ ರಾಜಸ್ಥಾನ ಸರ್ಕಾರವು ಅವರನ್ನು ಗಡಿ ಪ್ರದೇಶಕ್ಕೆ ತಲುಪಿಸುವ ಕೆಲಸ ಮಾಡಲಿಲ್ಲ. ಇನ್ನು ಮನೆಗೆ ತಲುಪಿಸುವುದನ್ನು ಮರೆತು ಬಿಡಿ. ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಕ್ಕಳು ಮನೆಗೆ ತಲುಪಲು ಅನುವು ಮಾಡಿಕೊಟ್ಟರು ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಕಾಂಗ್ರೆಸ್ ತನ್ನ ಎಲ್ಲಾ ಶಾಸಕರಿಗೆ ಭಾಗವಹಿಸದಂತೆ ಸೂಚಿಸಿದ್ದರೂ ಅದಿತಿ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು.ಇದು ಕಾಂಗ್ರೆಸ್ ಗೆ ಅರಗಿಸಲಾರದೆ ಸ್ಪೀಕರ್ ಗೆ ದೂರು ನೀಡಿದ್ದು ಶಾಸಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಅದಿತಿ ಸಿಂಗ್ ಮಾಜಿ ಶಾಸಕ‌ ದಿ.ಅಖಿಲೇಶ್ ಪ್ರತಾಪ್ ಸಿಂಗ್ ಅವರ ಪುತ್ರಿಯಾಗಿದ್ದು ಅಖಿಲೇಶ್ ಈ ಹಿಂದೆ ರಾಯ ಬರೇಲಿ ಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಳಿಕ ಕಾಂಗ್ರೆಸ್ ಗೆ ಸೇರಿದ್ದರು.

LEAVE A REPLY

Please enter your comment!
Please enter your name here