Saturday, July 2, 2022

Latest Posts

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದ ಪ್ರಭಾವಿ ಮುಖಂಡ!

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:

ವಿಧಾನಸಭಾ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ಕೆ.ವಿ ನವೀನ್ ಕಿರಣ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ನೇತೃತ್ವದಲ್ಲಿ ಯಡಿಯೂರಪ್ಪರನ್ನ ಭೇಟಿಯಾದ ಕೆ ವಿ ನವೀನ್ ಕಿರಣ್, ಗುರುವಾರ ಸಿಎಂ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧವೇ ಪ್ರತಿಸ್ಪರ್ಧಿಯಾಗಿ ನವೀನ್ ಕಿರಣ್ ಸ್ಪರ್ಧೆ ಮಾಡಿ ಸೋಲನುಭವಿಸಿದ್ದರು. ಅಂದಿನಿಂದ ರಾಜಕೀಯವಾಗಿ ಸುಧಾಕರ್ ವಿರೋಧಿಯಾಗಿಯೇ ಇದ್ದ ನವೀನ್ ಕಿರಣ್, ಈಗ ಸ್ವತಃ ಅವರ ನೇತೃತ್ವದಲ್ಲಿಯೇ ಬಿಜೆಪಿಗೆ ಜೈ ಎಂದಿದ್ದಾರೆ.

ರಾಜಕೀಯ ನಿಂತ ನೀರಲ್ಲ, ಬದಲಾವಣೆ ಸಹಜ. ವಿರೋಧಿಗಳನ್ನ ಪ್ರೀತಿಸೋದು ಸಹಜ ಅಂತ ತಮ್ಮ ಬಿಜೆಪಿ ಸೇರ್ಪಡೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನ ಬೆಳೆಸಿ ಬೆಂಬಲಿಸಿ ಪೋಷಿಸಿದ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರಿಗೂ ವಿಡಿಯೋ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಇನ್ನೂ ಸುಧಾಕರ್ ಅವರ ಅಪರೇಷನ್ ಸರ್ಜರಿಗಳು ಮುಂದುವರಿಯುತ್ತಿದ್ದು, ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಟಗೊಳಿಸಲು ಹಾಗೂ ತಮ್ಮ ನೆಲೆಯನ್ನ ಭದ್ರಪಡಿಸಿಕೊಳ್ಳೊಲು ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಪಕ್ಷದವರನ್ನ ಸೆಳೆದು ಬಿಜೆಪಿಗೆ ಬರ ಮಾಡಿಕೊಳ್ಳುವ ಕಾರ್ಯ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss