ಹೊಸದಿಗಂತ ಆನ್ ಲೈನ್ ಡೆಸ್ಕ್:
ಕಾಗದ ರಹಿತ ಬಜೆಟ್ ಅಧಿವೇಶನ ನಡೆಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಟ್ಯಾಬ್ಲೆಟ್ಗಳನ್ನು ಖರೀದಿಸುವಂತೆ ತಿಳಿಸಿದೆ.
ರಾಜ್ಯದಲ್ಲಿ 403 ವಿಧಾನಸಭಾ ಸದಸ್ಯರು ಮತ್ತು 100 ವಿಧಾನ ಪರಿಷತ್ ಸದಸ್ಯರಿದ್ದಾರೆ. ಪ್ರತಿ ಶಾಸಕರಿಗೆ ಆಪಲ್ ಐಪಾಡ್ ಖರೀದಿಸಲು ಸರ್ಕಾರ 50 ಸಾವಿರ ಹಣ ನೀಡುತ್ತಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ತಿಳಿಸಿದ್ದಾರೆ.
ಐಪಾಡ್ ಬಳಸುವ ಕುರಿತು ಸಚಿವರು ಈಗಾಗಲೇ ತರಬೇತಿಗೆ ಹಾಜರಾಗಿದ್ದಾರೆ. ಅಧಿವೇಶನಕ್ಕೆ ಮುನ್ನ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೂ ತರಬೇತಿ ಕೊಡಿಸಲಾಗುವುದು ಎಂದು ಅವರು ಹೇಳಿದರು.