Wednesday, August 17, 2022

Latest Posts

ಕಾಡಾನೆಗಳ ದಾಳಿ: ಮೂರು ಎಕರೆಗೂ ಅಧಿಕ ಪ್ರದೇಶದ ಬೆಳೆ ನಾಶ

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ದಾಳಿ ನಡೆಸಿರುವ ಕಾಡಾನೆಗಳು ಸುಮಾರು ಮೂರು ಎಕರೆಗಳಷ್ಟು ಪ್ರದೇಶದ ಜೋಳದ ಬೆಳೆಯನ್ನು ತಿಂದು ತುಳಿದು ಸಂಪೂರ್ಣ ನಾಶ ಪಡಿಸಿವೆ.
ದೊಡ್ಡತ್ತೂರು ಗ್ರಾಮದ ಕೃಷ್ಣ ಎಂಬವರಿಗೆ ಸೇರಿದ ಮೂರು ಎಕರೆ ಪ್ರದೇಶದ ಜೋಳದ ಬೆಳೆಯನ್ನು ನಾಶಪಡಿಸಿರುವ ಆನೆಗಳು, ಆ ಭಾಗದ ಕೆಸ ಕೇನೆ, ಬಾಳೆ ಬೆಳೆಗಳನ್ನೂ ತಿಂದು ತೇಗಿವೆ.
ಆನೆಕಾಡಿನಿಂದ ಬೆಂಡೆಬೆಟ್ಟ ಮೂಲಕ ಕಳೆದ ವಾರ 9 ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಹದುಗೂರು ವ್ಯಾಪ್ತಿಗೆ ಆಗಮಿಸಿದ್ದು, ಆ ಆನೆಗಳೇ ಪಕ್ಕದ ಗ್ರಾಮಗಳಿಗೆ ದಾಳಿ ಇಟ್ಟಿರುವುದಾಗಿ ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!