ಹೊಸದಿಗಂತ ವರದಿ,ಮೈಸೂರು:
ಒಂಟಿ ಸಲಗ ದಾಳಿಗೆ ಕೂಲಿ ಕಾರ್ಮಿಕನೊಬ್ಬ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಳೆಹೆಗ್ಗುಡಿಲು ಗ್ರಾಮದ ಹೊರವಲಯದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಜೋಯಿ(45)ಮೃತ ದುರ್ದೈವಿ. ಜೋಯಿ ಕೇರಳದವರ ಶುಂಠಿ ಗುತ್ತಿಗೆ ಭೂಮಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಇಂದು ಮುಂಜಾನೆ ಜಮೀನಿನಲ್ಲಿ ಪ್ರತಕ್ಷಗೊಂಡ ಒಂಟಿ ಸಲಗ ಆತನ ಮೇಲೆ ದಾಳಿ ನಡೆಸಿ, ತುಳಿದು ಸಾಯಿಸಿ ಸಮೀಪದಲ್ಲಿದ್ದ ಹಳ್ಳಕ್ಕೆ ಎಸೆದಿದೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸ್ಥಳದಲ್ಲೇ ಸುತ್ತಾಡುತ್ತಿರುವ ಒಂಟಿ ಸಲಗ ಆನೆಯನ್ನು ಕಾಡಿಗೆ ಹಿಮ್ಮಟ್ಟಿಸುವ ಕಾರ್ಯಾಚರಣೆ ನಡೆಸಿದರು. ಈ ಘಟನೆ ಬಗ್ಗೆ ಸರಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.