Thursday, June 30, 2022

Latest Posts

ಕಾಡಾನೆ ದಾಳಿಗೆ ವೃದ್ಧ ಬಲಿ: ಎರಡು ಮನೆಗಳು ಜಖಂ

ಹೊಸದಿಗಂತ ವರದಿ,ಮೈಸೂರು:

ಕಾಡಾನೆ ದಾಳಿಯಿಂದ ವೃದ್ಧನೊಬ್ಬ ಬಲಿಯಾಗಿ, ಆತನ ಪತ್ನಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಚಿನ್ನಪ್ಪ (58) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿ. ಕಾಡಾನೆ ದಾಳಿಯಿಂದ ಪತ್ನಿ ಕೊಟ್ಟೂರಮ್ಮಗೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮದವೇರಿದ್ದ ಕಾಡಾನೆ ಮನೆಗಳ ಮೇಲೆ ದಾಳಿಯಿಟ್ಟು ದಾಂಧಲೆ ನಡೆಸಿದೆ. ಈ ವೇಳೆ ಹೊರಗೆ ಬಂದ ಚಿನ್ನಪ್ಪರ ಮೇಲೆ ಆನೆ ದಾಳಿ ನಡೆಸಿದೆ. ರಕ್ಷಣೆಗೆ ಯತ್ನಿಸಿದ ಆತನ ಪತ್ನಿ ಗಾಯಗೊಂಡಳು. ಅಲ್ಲದೇ ಆನೆ ಮತ್ತೊಂದು ಮನೆ ಮೇಲೂ ದಾಳಿ ನಡೆಸಿದೆ.

ಎಚ್ಚೆತ್ತ ಗ್ರಾಮಸ್ಥರು, ಜೋರಾಗಿ ಕೂಗು ಎಬ್ಬಿಸಿ, ಕಿರುಚಾಡಿದಿದ್ದರಿಂದ ಆನೆ ತನ್ನ ದಾಂಧಲೆಯನ್ನು ನಿಲ್ಲಿಸಿ, ಅಲ್ಲಿಂದ ತೆರಳಿದೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಕೆಲ ಕಾಲ ಭಯ, ಆತಂಕದ ವಾತಾವರಣವುಂಟಾಗಿತ್ತು.

ಆನೆ ದಾಳಿಯಿಂದ ಎರಡು ಮನೆಗಳು ಜಖಂಗೊoಡಿದೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಆನೆಯನ್ನು ಕಾಡಿಗೆ ಓಡಿಸುವ ಪ್ರಯತ್ನ ನಡೆಸಿದರು. ಈ ಬಗ್ಗೆ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss