Friday, July 1, 2022

Latest Posts

ಕಾಡಾನೆ ಹಾವಳಿ: ಕೊಯ್ಲು ಮಾಡಿದ ಭತ್ತದ ಬೆಳೆ ನಾಶ

ಹೊಸದಿಗಂತ ವರದಿ,ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ- ಮದಲಾಪುರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದಾಗಿ ಭಾರೀ ಬೆಳೆ ನಷ್ಟವಾಗಿದೆ.

ಬೆಂಡೆ ಬೆಟ್ಟದ ಕಡೆಯಿಂದ ಬಂದ ಕಾಡಾನೆಗಳು ಕೂಡಿಗೆಯ ಸೈನಿಕ ಶಾಲೆಯ ತಡೆಗೊಡೆಯ ಸಮೀಪದ ದಾರಿಯಲ್ಲಿ ಬಂದು ಹಾರಂಗಿ ನದಿಯನ್ನು ದಾಟಿ ಮಲ್ಲೇನಹಳ್ಳಿ ಮದಲಾಪುರ ಕೊಪ್ಪಲು ಭಾಗದ ಹಾರಂಗಿ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಯನ್ನು ತಿಂದು ತುಳಿದು ಭಾರೀ ನಷ್ಟ ಉಂಟು ಮಾಡಿವೆ.

ಭತ್ತದ ಬೆಳೆ ಕೊಯ್ಲು ಮಾಡಿ ಮನೆ ಬಂದಿದ್ದವರು ಮರು ದಿವಸ ಜಮೀನಿಗೆ ಹೋಗುವಷ್ಟರಲ್ಲಿ ಭತ್ತದ ಗದ್ದೆಗಳಲ್ಲಿದ್ದ ಬೆಳೆಯನ್ನು ಸಂಪೂರ್ಣವಾಗಿ ತುಳಿದು, ತಿಂದು ಹಾಳು ಮಾಡಿವೆ.

ಆ ವ್ಯಾಪ್ತಿಯ ಕೆ.ಪಿ.ಸೋಮಣ್ಣ,ಮೋಹನ್, ಸುರೇಶ, ವೆಂಕಟೇಶ ಎಂಬವರ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಸ್ಧಳಕ್ಕೆ ಕಣಿವೆ ಉಪ ವಲಯ ಅರಣ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ,ಪರಿಹಾರ ನೀಡುವ ಭರವಸೆಯಿತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss