Sunday, August 14, 2022

Latest Posts

ಕಾಡಾನೆ ಹಾವಳಿ ತಡೆಗೆ ಟೆಂಟಕಲ್ ಸೋಲಾರ್ ಆಳವಡಿಕೆ ಕಾರ್ಯ ಆರಂಭ

ಹೊಸದಿಗಂತ ವರದಿ,ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಾಡಾನೆ ಹಾವಳಿಯಿಂದ ರೈತರು ಭಾರೀ ನಷ್ಟ ಅನುಭವಿಸಿದ್ದು, ಇದೀಗ ಕಾಡಾನೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಟೆಂಟಕಲ್ ಸೋಲಾರ್ ಬೇಲಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹಾರಂಗಿ ನದಿ ದಾಟಿ ಹುದುಗೂರು ಗ್ರಾಮಕ್ಕೆ ಕಾಡಾನೆಗಳು ಬರುವ ವ್ಯಾಪ್ತಿಯಲ್ಲಿ ಟೆಂಟಕಲ್ ಸೋಲಾರ್ ಬೇಲಿ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಆನೆಕಾಡಿನ ಅಂಚಿನಿಂದ ಬರುವ ಕಾಡಾನೆಗಳು ಬೆಂಡೆಬೆಟ್ಟದ ಮಾರ್ಗವಾಗಿ ಬಂದು ಹಾರಂಗಿ ನದಿ ದಾಟಿಕೊಂಡು ಹುದುಗೂರು, ಮಾವಿನಹಳ್ಳ ಮದಲಾಪುರ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಭತ್ತ ಸೇರಿದಂತೆ ಅನೇಕ ಬೆಳೆಗಳನ್ನು ಹಾಳು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯ ನೂರಾರು ರೈತರು ಅರಣ್ಯ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಗಳನ್ನು ಭೇಟಿ ಮಾಡಿ ಕಾಡಾನೆ ಹಾವಳಿ ತಡೆಯುವಂತೆ ಮನವಿ ಸಲ್ಲಿಸಿದ್ದರು.

ಸ್ಧಳ ಪರಿಶೀಲನೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡಾನೆಗಳ ತಡೆಗೆ ನೂತನ ಯೋಜನೆಯಾದ ಟೆಂಟಕಲ್ ಸೋಲಾರ್ ಬೇಲಿ ಅಳವಡಿಸಲು ಕ್ರಮವನ್ನು ಕೈಗೊಂಡಿದ್ದಾರೆ. ಅದರಂತೆ ಹುದುಗೂರು ವ್ಯಾಪ್ತಿಯಲ್ಲಿ ಹಾರಂಗಿ ನದಿ ತಟದಲ್ಲಿ ಸೋಲಾರ್ ಬೇಲಿ ಅಳವಡಿಸುವ ಕಾರ್ಯ ಅರಂಭವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss