Sunday, June 26, 2022

Latest Posts

ಕಾಡಿಗೆ ಬಂದ ಅಲ್ಲು ಅರ್ಜುನ್, ನೋಡಲು ಮುಗಿಬಿದ್ದ ಅಭಿಮಾನಿಗಳು, ಅದು ಎಲ್ಲಿ ಗೊತ್ತಾ?

ಟಾಲಿವುಡ್  ನಟ ಅಲ್ಲು ಅರ್ಜುನ್ ರಗಡ್ ಲುಕ್ ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಅಲ್ಲು ಅರ್ಜುನ್ ಕುಟುಂಬದ ಜೊತೆ ಮನೆಯಿಂದ ಹೊರಬಂದಿದ್ದಾರೆ. ತೆಲಂಗಾಣದ ಅಡಿಲಾಬಾದ್ ಕಾಡಿಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದಾರೆ. ಅಲ್ಲು ಅರ್ಜುನ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಾರೆ. ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಕಾರಿನ ಒಳಗೆ ಕುಳಿತಿದ್ದ ಅಲ್ಲು, ಜನರ ಗುಂಪು ನೋಡಿ ಕೆಳಗೆ ಇಳಿಯಲಿಲ್ಲ. ಕಾರಿನ ಒಳಗೆಯೇ ಕುಳಿತಿದ್ದ ಅಲ್ಲು ಅರ್ಜುನ್ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸಂತಸಪಟ್ಟಿದ್ದಾರೆ.

ಬಳಿಕ ಕಾರಿನನಿಂದ ಇಳಿದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಅಲ್ಲು ಅರ್ಜುನ್ ನೋಡಿ ಅಭಿಮಾನಿಗಳು ಫುಲ್  ಖುಷ್ ಆಗಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ಅಲ್ಲು, ಹರಿತ ವನಮ್ ಪಾರ್ಕ್ ಮತ್ತು ಕುಂತಲಾ ಜಲಪಾತಕ್ಕೆ ಭೇಟಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss