Wednesday, June 29, 2022

Latest Posts

ಕಾಡಿನಿಂದ ನಾಡಿಗೆ ಬಂದು ಭಯಹುಟ್ಟಿಸಿದ್ದ ‘ಅತಿಥಿ’ ಈಗ ಅರಣ್ಯ ಇಲಾಖೆಯ ಬೋನಿನಲ್ಲಿ ಬಂಧಿ!

ಹೊಸದಿಗಂತ ವರದಿ,ತುಮಕೂರು:

ಕುಣಿಗಲ್ ತಾಲೂಕು ಯಡಿಯೂರು ಹೋಬಳಿ ನಡೆಮಾವಿನಪುರ ಹಣೆ ಹಂತ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಚಿರತೆ ಈಗ ಅರಣ್ಯ ಇಲಾಖೆಯ ಬೋನು ಸೇರಿದೆ.

ಸದಥಳೀಯ ನಿವಾಸಿ ಶಂಕರ್ ಯಾನೆ ನಂಜೇಗೌಡ ಎಂಬವರ ತೋಟದಲ್ಲಿ ಜ. 22 ರಂದು ಈ ಚಿರತೆ ಕಾಣಿಸಿಕೊಂಡಿತ್ತು. ಮುಂಜಾನೆ 5 ಗಂಟೆ ಸಮಯದಲ್ಲಿ ತೋಟದಲ್ಲಿ ಅಡ್ಡಾಡುವ ಮೂಲಕ ಸುಮಾರು 3 ವರ್ಷ ಪ್ರಾಯದ ಈ ಗಂಡು ಚಿರತೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿತ್ತು.

ಮಾಹಿತಿ ತಿಳಿದ ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಈ ಅತಿಥಿ ಮತ್ತೆ ಕಾಡು ಸೇರುವ ತಯಾರಿಯಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss