Wednesday, August 10, 2022

Latest Posts

ಕಾಡು ಬೆಕ್ಕನ್ನು ಬೇಟೆಯಾಡಿದ ಪ್ರಕರಣ: ಇಬ್ಬರ ವಿರುದ್ಧ ಮೊಕದ್ದಮೆ ದಾಖಲು

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಕಾಡು ಬೆಕ್ಕನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಿಬ್ಬಂದಿಗಳು ಇಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರೂ ತಲೆ ಮರೆಸಿಕೊಂಡಿದ್ದಾರೆ.
ಕಾಡು ಬೆಕ್ಕು (ರಸ್ಟಿ ಸ್ವಾಪಟೆಡ್ ಕ್ಯಾಟ್)ನ್ನು ಕೊಂದು ಮಾಂಸ ಮಾಡಿ ಸೇವಿಸಿದ್ದಲ್ಲದೆ ಅದರ ಫೋಟೋ ತೆಗೆದು ಇತರರೊಂದಿಗೆ ಹಂಚಿಕೊಂಡ ಆರೋಪಿಗಳು ಈಗ ಸಿಕ್ಕಿಬೀಳುವ ಸ್ಥಿತಿ ತಂದುಕೊಂಡಿದ್ದಾರೆ. ಕಡೂರು ತಾಲ್ಲೂಕು ಯಗಟಿ ಸಮೀಪದ ಭೈರಗೂಂಡನಹಳ್ಳಿಯ ನಿವಾಸಿಗಳಾದ ನಾಗರಾಜ, ರಂಗನಾಥ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಬೇಟೆಗೆ ಬಳಸಿದ ಉರುಳು, ಇನ್ನಿತರೆ ವಸ್ತುಗಳ್ನನು ವಶಪಡಿಸಿಕೂಳ್ಳಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ತನೋಜ್ ಕುಮಾರ್ ಮತ್ತು ವನ್ಯಜೀವಿ ಪರಿಪಾಲಕ ಜಿ.ವೀರೇಶ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss