ಮಂಗಳೂರು: ಕಾದು ಕಬ್ಬಿಣದಂತಾಗಿದ್ದ ಕರಾವಳಿಯ ನೆಲಕ್ಕೆ ಗುರುವಾರ ಬೆಳ್ಳಂಬೆಳಗ್ಗೆ ವರುಣ ತಂಪೆರೆದಿದ್ದಾನೆ.
ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯ ಹಲವೆಡೆಗಳಲ್ಲಿ ನಸುಕಿಗೆ ಮಳೆಯಾಗಿದೆ. ಕರಾವಳಿ ಭಾಗದಲ್ಲಿ ದಿನದಿಂದ ದಿನಕ್ಕೆ ಏರುತ್ತಿದ್ದ ಉಷ್ಣಾಂಶ ಜನತೆಯನ್ನು ಕಂಗಾಲಾಗಿಸಿತ್ತು. ಇದೀಗ ಕೆಲಕಾಲ ಬಂದು ಹೋಗಿರುವ ವರುಣ ಜನತೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾನೆ.
ಬತ್ತುತ್ತಿರುವ ಜಲಮೂಲಗಳು: ಈ ಬಾರಿ ಬೇಸಗೆ ಆರಂಭದಲ್ಲಿಯೆ ಜೀವನದಿಗಳು, ಕೆರೆ, ಬಾವಿಗಳು ಬತ್ತುತ್ತಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಲವೆಡೆಗಲಲ್ಲಿ ಈಗಲೇ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಇದರ ನಡುವೆಯೇ ವರುಣ ಒಂದಿಷ್ಟು ನಿರೀಕ್ಷೆ ಮೂಡಿಸಿದ್ದಾನೆ.