Wednesday, August 10, 2022

Latest Posts

ಕಾನೂನು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕೆಎಸ್‌ಎಲ್‌ಯು ನಿರ್ಧಾರ ವಿರೋಧಿಸಿ ಪ್ರತಿಭಟನೆ

ಮೈಸೂರು: ಕೊರೋನಾ ವೈರಾಣು ಸೋಂಕು ಹರಡುವಿಕೆ ಭೀತಿಯ ನಡುವೆ ಕಾನೂನು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕೆಎಸ್‌ಎಲ್‌ಯು ನಿರ್ಧಾರವನ್ನು ವಿರೋಧಿಸಿ ಭಾರತ ರಾಷ್ಟಿçÃಯ ಒಕ್ಕೂಟ ಮೈಸೂರು ಜಿಲ್ಲೆ ಶಾಖೆವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ನ್ಯಾಯಾಲಯದ ಎದುರಿರುವ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಕೊರೋನಾ ವೈರಸ್ ಹಾವಳಿಯಿಂದಾಗಿ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಎಷ್ಟು ಅಹಿತಹಕರ ಘಟನೆಗಳು ನಡೆದಿದೆ. ಎಷ್ಟೋ ಜೀವಗಳು ಬಲಿಯಾಗಿದೆ. ಯುಜಿಸಿ ಮಾರ್ಗಸೂಚಿಯಂತೆ ಎಲ್ಲಾ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದವರ ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಲು ಆದೇಶಿಸಿದೆ, ಆದರೆ ಕೆಎಸ್ ಎಲ್ ಯು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಪರೀಕ್ಷೆ ನಡೆಸಲು ತಯಾರಿ ನಡೆಯುತ್ತಿದೆ, ಎಷ್ಟೋ ಕಾನೂನು ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಹೊರ ಜಿಲ್ಲೆಗಳಿಂದ ನಾನಾ ಕಡೆಯಿಂದ ಆಗಮಿಸುತ್ತಾರೆ. ಈ ಸಮಯದಲ್ಲಿ ಯಾವುದೇ ರೀತಿಯ ಹೆಚ್ಚು ಕಡಿಮೆ ಆದಲ್ಲಿ ಜವಾಬ್ದಾರರು ಯಾರು? ಕಾನೂನು ವಿದ್ಯಾರ್ಥಿಗಳಿಗೆ ಉಳಿದು ಕೊಳ್ಳುವ ಯಾವುದೇ ರೀತಿಯ ತಯಾರಿ ಕೆಎಸ್ ಎಲ್ ಯು ಮಾಡಿಲ್ಲ. ಪಿಜಿ, ಹಾಸ್ಟೆಲ್ ಎಲ್ಲವೂ ಸಹ ಮುಚ್ಚಿದೆ. ಶೇ ೫೦ ರಷ್ಟು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮುಗಿಸಿಲ್ಲ. ಆನ್ ಲೈನ್ ತರಗತಿಗಳು ಎಷ್ಟೋ ವಿದ್ಯಾರ್ಥಿಗಳಿಗೆ ಅರ್ಥಕೂಡ ಆಗಿಲ್ಲ. ಆದ್ದರಿಂದ ನಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಹಿಂದಿನ ತರಗತಿಯ ಅಂಕಿ ಅಂಶಗಳನ್ನು ಅನುಸರಿಸಿ ಉತ್ತೀರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎಚ್.ಎ.ರಫಿಕ್‌ಅಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss