Monday, August 15, 2022

Latest Posts

ಕಾಪಿರೈಟ್ ಸಮಸ್ಯೆಯಿಂದ ಅಮಿತ್​ ಶಾ ಪ್ರೊಫೈಲ್​ ಪೋಟೋ ತೆಗೆದುಹಾಕಿದ ಟ್ವಿಟರ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಮಿತ್ ಶಾ ಅವರ ಪ್ರೊಫೈಲ್ ಫೋಟೋಗೂ ಕಾಪಿರೈಟ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದ ಫೋಟೋವನ್ನು ಟ್ವಿಟ್ಟರ್ ಡಿಲೀಟ್ ಮಾಡಿದ್ದು, ಕೆಲ ಸಮಯದ ಬಳಿಕ ಮರುಸ್ಥಾಪನೆ ಆಗಿರುವುದಾಗಿ ವರದಿಗಳು ತಿಳಿಸಿವೆ.

ಇತ್ತೀಚೆಗಷ್ಟೆ ಬಿಸಿಸಿಐ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋವನ್ನು ಕಾಪಿರೈಟ್ ಸಮಸ್ಯೆಯಿಂದ ಟ್ವಿಟ್ಟರ್ ಡಿಲೀಟ್ ಮಾಡಿತ್ತು. ದೀಗ ಅಮಿತ್ ಶಾ ಅವರ ಪ್ರೊಫೈಲ್ ಫೋಟೋಗೂ ಕಾಪಿರೈಟ್ ಸಮಸ್ಯೆ ಉಂಟಾಗಿತ್ತು.

ಕೆಲ ಸಮಯ ಅಮಿತ್​ ಷಾ ಅವರ ಟ್ವಿಟರ್​ ಪ್ರೊಫೈಲ್ ತೆಗೆಯಲಾಗಿತ್ತು. . ಕಾಪಿ ರೈಟ್​ ಉಲ್ಲಂಘನೆಯಾಗಿದೆ ಎಂದು ಪ್ರೊಫೈಲ್​​ನಲ್ಲೇ ಸೂಚನೆ ನೀಡಲಾಗಿತ್ತು. ಕಾಪಿ ರೈಟ್​ ಮಾಲೀಕ ವರದಿ ಮಾಡಿದ್ದರಿಂದ ತಾತ್ಕಾಲಿಕವಾಗಿ ತಡೆಹಿಡಿದಿದ್ದ ಟ್ವಿಟರ್​ ಪ್ರೊಫೈಲ್​ ನಂತರ ಹಾಕಲಾಗಿದೆ.

ಅಮಿತ್ ಶಾ ಅವರ ಪ್ರೊಫೈಲ್ ಫೋಟೋ ಡಿಲೀಟ್ ಆದ ನಂತರದಲ್ಲಿ ಟ್ವಿಟರ್ ಸಂಸ್ಥೆಯ ವಕ್ತಾರ ಪ್ರತಿಕ್ರಿಯೆ ನೀಡಿದ್ದಾರೆ. ಅಜಾಗರೂಕತೆ ಮತ್ತು ನಮ್ಮ ಜಾಗತಿಕ ಹಕ್ಕು ಸ್ವಾಮ್ಯಗಳ ನೀತಿಗಳಡಿಯಲ್ಲಿ ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ
 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss