ಕಾಪು| ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ಅನಿಲ ಸೋರಿಕೆ ಶಂಕೆ: ಗ್ರಾಮಸ್ಥರಲ್ಲಿ ಆತಂಕ

0
56

ಕಾಪು:  ತಾಲೂಕಿನ ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ನಿರ್ಮಾಣವಾಗಿರುವ ಕಚ್ಚಾತೈಲ ಸಂಗ್ರಹಗಾರದಲ್ಲಿ ಅನಿಲ ಸೋರಿಕೆಯ ಭೀತಿ ಎದುರಾಗಿದ್ದು ಸ್ಥಳೀಯರು ಆತಂಕಿತರಾಗಿದ್ದಾರೆ.
ಸೋಮವಾರ ಮಧ್ಯಾಹ್ನದಿಂದ ಅನಿಲವಾಸನೆ ಬರುತ್ತಿದ್ದು ಕೂರಾಲು ಪರಿಸರದಲ್ಲಿ ಮಕ್ಜಳು ಸೇರಿ ಹಿರಿಯರು ವಾಂತಿ ಮಾಡಿದ್ದು ಮೂರ್ಛೆ ತಪ್ಪಿದ ಅನುಭವಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಸ್ಥಳೀಯರು ಮಜೂರು ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದು ಪಂಚಾಯತ್ ಆಡಳಿತವು ಈ ಬಗ್ಗೆ ಗಮನಹರಿಸುವಂತೆ ಕಂಪೆನಿ ಅಕಾರಿಗಳಿಗೆ ಮಾಹಿತಿ ನೀಡಿದ್ದು ಸಂಜೆಯವರೆಗೂ ಅನಿಲವಾಸನೆ ಮುಂದುವರಿದ ಹಿನ್ನಲೆಯಲ್ಲಿ ಸ್ಥಳೀಯ ಜನಜಾಗೃತಿ ಸಮಿತಿಯೊಂದಿಗೆ ಜನಪ್ರತಿನಿಗಳು ಮತ್ತು ಸ್ಥಳೀಯರು ಅನಿಲವಾಸನೆಯ ಜಾಡು ಹುಡುಕಲಾರಂಭಿಸಿದರು. ಈಬಗ್ಗೆ ತಹಶಿಲ್ದಾರ್, ಪೊಲೀಸ್ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆಗೂ ಮಾಹಿತಿ ನೀಡಿದ್ದು ಇವರೆಲ್ಲರೂ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಮಾಲಿನ್ಯ ನಿಯಂತ್ರಣ ಅಕಾರಿ ವಿಜಯ ಹೆಗ್ಡೆ, ಜಿ.ಪಂ ಸದಸ್ಯೆ ಶಿಲ್ಪಾ ಜಿ ಸುವರ್ಣ, ತಾ.ಪಂ ಸದಸ್ಯೆ ಶಶಿಪ್ರಭಾ ಶೆಟ್ಟಿ, ಮಜೂರು ಗ್ರಾ.ಪಂ ಅಧ್ಯಕ್ಷ ಸಂದೀಪ್ ರಾವ್, ಉಪಾಧ್ಯಕ್ಷೆ ಸಹಾನ ತಂತ್ರಿ, ಜನಜಾಗೃತಿ ಸಮಿತಿ ಸಂಚಾಲಕ ಅರುಣ್ ಶೆಟ್ಟಿ ಪಾದೂರು, ಪೈಯ್ಯಾರು ಶಿವರಾಮ ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ರಂಗನಾಥ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here