ಹೊಸದಿಗಂತ ವರದಿ, ಕೊಡಗು:
ಹುಲಿ ದಾಳಿಗೆ ಕರುವೊಂದು ಮೃತಪಟ್ಟಿರುವ ಘಟನೆ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ನಡೆದಿದೆ. ಮಾಲ್ದಾರೆ ಗ್ರಾಮದ ಶ್ರೀನಿವಾಸ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಕರುವೊಂದರ ಮೇಲೆ ದಾಳಿ ನಡೆದಿದೆ.
ಕಾರ್ಮಿಕರು ಕೆಲಸ ಮಾಡಲು ಕಾಫಿ ತೋಟದೊಳಗೆ ತೆರಳಿದ ಸಂದರ್ಭ ಕರುವಿನ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಈ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿರುವ ಗ್ರಾಮಸ್ಥರು, ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.