spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಬೂಲ್ ಡ್ರೋನ್ ದಾಳಿಯಲ್ಲಿ ಅಮಾಯಕರ ಸಾವು: ಕ್ಷಮೆಯಾಚಿಸಿದ ಅಮೆರಿಕ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಐಸಿಸ್ ಖುರಾಸನ್ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿರುವ ದಾಳಿಯಲ್ಲಿ ಅಮಾಯಾಕ ನಾಗರಿಕರು ಮೃತಪಟ್ಟಿರುವುದಾಗಿ ಅಮೆರಿಕ ತಪ್ಪೊಪ್ಪಿಕೊಂಡಿದೆ.

‘ಅಮೆರಿಕ ನಡೆಸಿರುವ ಡ್ರೋನ್ ದಾಳಿಯಲ್ಲಿ ಮಕ್ಕಳು ಸೇರಿದಂತೆ 10 ಅಮಾಯಕ ನಾಗರಿಕರು ಮೃತಪಟ್ಟಿರುವುದು ನಿಜ’ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ನ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ ತಪ್ಪೊಪ್ಪಿಕೊಂಡು, ಕ್ಷಮೆಯಾಚಿಸಿದ್ದಾರೆ.

ತನಿಖೆ ನಡೆದ ನಂತರ ಡ್ರೋನ್ ದಾಳಿಯಲ್ಲಿ ಮಕ್ಕಳು ಸೇರಿದಂತೆ ನಾಗರಿಕರು ಮೃತಪಟ್ಟಿರುವುದು ಖಚಿತವಾಗಿದೆ. ಇದು ನಮ್ಮಿಂದ ಆಗಿರುವ ತಪ್ಪು. ನಾನು ಈ ಬಗ್ಗೆ ಕ್ಷಮೆ ಕೇಳುತ್ತೇನೆ. ಮಿಲಿಟರಿ ಕಮಾಂಡರ್ ಆಗಿ, ಈ ಡ್ರೋನ್ ದಾಳಿಗೆ ನಾನೇ ಸಂಪೂರ್ಣ ಹೊಣೆಯಾಗಿದ್ದು ನಾಗರಿಕರ ಸಾವಿಗೂ ನಾವೇ ಕಾರಣ, ಅವರ ಕುಟುಂಬಸ್ಥರಿಗೆ ನಮ್ಮ ಸಂತಾಪಗಳು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss