Wednesday, June 29, 2022

Latest Posts

ಕಾಬೂಲ್ ನಲ್ಲಿ 23 ರಾಕೆಟ್ ಗಳ ದಾಳಿ: ಉಗ್ರರ ಆಟಕ್ಕೆ 8 ಮಂದಿ ಬಲಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ರಾಕೆಟ್ ದಾಳಿ ನಡೆದಿದ್ದು, 8 ಮಂದಿ ಬಲಿಯಾಗಿರುವ ಘಟನೆ ನಡೆದಿದೆ.

ಶನಿವಾರ ಬೆಳಗ್ಗೆ 9 ಗಂಟೆಗೆ ಉಗ್ರರು 23 ರಾಕೆಟ್ ಗಳನ್ನು ಉಡಾಯಿಸಿದ್ದು, 8 ಮಂದಿ ಬಲಿಯಾಗಿದ್ದಾರೆ. 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ಪ್ರಾರ್ಥಮಿಕ ತನಿಖಾ ವರದಿ ತಿಳಿಸಿದೆ.

ಈ ದಾಳಿಯು ಅನೇಕ ರಾಯಭಾರಿ ಕಚೇರಿಗಳು ಹಾಗೂ ಅಂತಾರಾಷ್ಟ್ರೀಯ ಕಂಪನಿಗಳು ಇರುವ ಹಸಿರು ವಲಯದಲ್ಲಿ ಸಂಭವಿಸಿದೆ. ಇದರಿಂದ ಅನೇಕ ಕಟ್ಟಡಗಳಿಗೆ ಹಾನಿಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಮಾತನಾಡಿದ ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಅರಿಯನ್, ಈ ಘಟನೆ ತಾಲಿಬಾನ್ ಉಗ್ರ ಸಂಘಟನೆಯೇ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಕಾಹಿದ್ ಈ ರಾಕೆಟ್ ದಾಳಿಗೂ ತಾಲಿಬಾನಿಗೂ ಸಂಬಂಧವಿಲ್ಲ ಎಂದು ರಾಕೆಟ್ ದಾಳಿ ಆರೋಪವನ್ನು ನಿರಾಕರಿಸಿದ್ದಾರೆ.

ಇತ್ತೀಚೆಗೆ ಕಾಬೂಲ್ ನ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಉಗ್ರರ ದಾಳಿಯಲ್ಲಿ 50 ಮಂದಿ ಬಲಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss