Sunday, August 14, 2022

Latest Posts

ಕಾರಣ ಹೇಳದೇ ಹೊರಟ ರವಿ : “ಗಾಢ್ ಫಾದರ್” ಮತ್ತೆ ಹುಟ್ಟಿ ಬರಲಿ ಎನ್ನುವುದು ಎಲ್ಲರ ‘ಪ್ರಾರ್ಥನೆ’

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬರವಣಿಗೆಯಲ್ಲಿಯೇ ಹೆಸರು ಮಾಡಿದ ರವಿ ಬೆಳಗೆರೆ ಬರೆಯುತ್ತಲೇ ಇಹಲೋಕ ತ್ಯಜಿಸಿದರು. ರವಿ ಬೆಳಗೆರೆ ಎಂದರೆ ಮೊದಲಿಗೆ ನೆನಪಾಗುವುದು ಅವರ ಪುಸ್ತಕಗಳ ಸಾಲು. ಒಂದೇ ರೀತಿಯ ಬರಹಗಳಿಗೆ ಸೀಮಿತವಾಗದೇ ಈಗಿನ ತಲೆಮಾರಿನಿಂದ ಹಳೆ ತಲಾಮಾರಿನವರಿಗೂ ಮೆಚ್ಚಿಗೆಯಾಗುವಂತ ಬರಹಗಳನ್ನು ಬರೆದಿದ್ದರು.

1980ರಲ್ಲಿ ಅವರ ಸಾಹಿತ್ಯ ಕೃಷಿ ಆರಂಭಿಸಿದ ರವಿ ಬೆಳಗೆರೆ ಅಲ್ಲಿಂದ ಅವರು 3 ಕಥಾ ಸಂಕಲನ, 1 ಕವನಸಂಕಲನ, 11 ಕಾದಂಬರಿ, 8 ಅನುವಾದ ಕೃತಿ, 11 ಐತಿಹಾಸಿಕ ಕೃತಿ, 4 ಜೀವನಕಥೆ, 10 ಕ್ರೈಮ್ ಕೃತಿಗಳು ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನ ರಚಿಸಿ ಬಿಡುಗಡೆ ಮಾಡಿದ್ಧಾರೆ.

ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಹಾಗೆಯೇ ಬೆಂಗಳೂರಿನಲ್ಲಿ  ಶಾಲೆ ನಿರ್ಮಿಸಿದ್ದರು. ಪ್ರಾರ್ಥನಾ ಎಂದು ಹೆಸರಿಟ್ಟು ನಡೆಸುತ್ತಿದ್ದರು.

ರವಿ ಬೆಳಗೆರೆ ಅವರ ಕೃತಿಗಳು:

1980 – ದಾರಿ (ಕಥಾ ಸಂಕಲನ)
1983 – ಅಗ್ನಿಕಾವ್ಯ (ಕವನ ಸಂಕಲನ)
1983 – ಗೋಲಿಬಾರ್ (ಕಾದಂಬರಿ)1983 – ವಿವಾಹ (ಅನುವಾದ)
1984 – ನಕ್ಷತ್ರ ಜಾರಿದಾಗ (ಅನುವಾದ)
1990 – ಅರ್ತಿ (ಕಾದಂಬರಿ)
1991 – ಪ್ಯಾಸಾ (ಜೀವನಕಥೆ)
1991 – ರಾಜೀವ್ ಹತ್ಯೆ ಯಾಕಾಯ್ತು? ಹೇಗಾಯ್ತು
1995 – ಪಾ. ವೆಂ. ಹೇಳಿದ ಕಥೆ (ಕಥಾ ಸಂಕಲನ)
1995 – ಪಾಪಿಗಳ ಲೋಕದಲ್ಲಿ ಭಾಗ 1
1996 – ಮಾಂಡೋವಿ (ಕಾದಂಬರಿ)
1997 – ಖಾಸ್ ಬಾತ್ 1996, 1997, 1998 (ಜೀವನಕಥೆ)
1997 – ಪಾಪಿಗಳ ಲೋಕದಲ್ಲಿ ಭಾಗ 2
1998 – ಲವಲವಿಕೆ 1
1998 – ಮಾಟಗಾತಿ (ಕಾದಂಬರಿ)
1998 – ಮೈಸೂರು ಸೀರಿಯಲ್ ಕಿಲ್ಲರ್ ರವೀಂದ್ರ (ಕ್ರೈಮ್)
1999 – ಒಮರ್ಟಾ (ಕಾದಂಬರಿ)
1999 – ಹಿಮಾಲಯನ್ ಬ್ಲಂಡರ್ (ಅನುವಾದ)
1999 – ಕಾರ್ಗಿಲ್​ನಲ್ಲಿ 17 ದಿನ (ಯುದ್ಧಕಥೆ)
2000 – ಕಂಪನಿ ಆಫ್ ವುಮೆನ್ (ಅನುವಾದ)
2000 – ಸರ್ಪ ಸಂಬಮಧ (ಕಾದಂಬರಿ)
2000 – ಸಂಜಯ (ಜೀವನಕಥೆ)
2001 – ಒಟ್ಟಾರೆ ಕಥೆಗಳು (ಕಥಾ ಸಂಕಲನ)
2001 – ಟೈಮ್ ಪಾಸ್ (ಅನುವಾದ)
2001 – ಭೀಮಾ ತೀರದ ಹಂತಕರು
2001 – ಕೇಳಿ (ಲೇಖನ ಸಂಗ್ರಹ)
2001 – ಪಾಪದ ಹೂವು ಫೂಲನ್ (ಜೀವನಕಥೆ)
2002 – ಮುಸ್ಲಿಮ್
2002 – ಬಾಟಂ ಐಟಂ ಭಾಗ 1
2002 – ಇಂದ್ರೆಯ ಮಗ ಸಂಜಯ
2002 – ರಾಜ ರಹಸ್ಯ (ಅನುವಾದ)
2003 – ಹೇಳಿ ಹೋಗು ಕಾರಣ (ಕಾದಂಬರಿ)
2003 – ಗಾಂಧಿ ಹತ್ಯೆ ಮತ್ತು ಗೋಡ್ಸೆ
2003 – ನೀ ಹಿಂಗ ನೋಡಬ್ಯಾಡ ನನ್ನ (ಕಾದಂಬರಿ)
2003 – ಖಾಸ್ ಬಾತ್ 1999, 2000
2003 – ಬಾಟಮ್ ಐಟಂ ಭಾಗ 2 (ಲೇಖನ ಸಂಗ್ರಹ)
2004 – ಲವಲವಿಕೆ ಭಾಗ 2
2005 – ಗಾಡ್ ಫಾದರ್ (ಅನುವಾದ)
2005 – ಬ್ಲ್ಯಾಕ್ ಫ್ರೈಡೇ (ಅನುವಾದ)
2005 – ಪಾಪಿಗಳ ಲೋಕದಲ್ಲಿ (ಕ್ರೈಮ್)
2006 – ಬಾಟಮ್ ಐಟಂ ಭಾಗ 3 (ಲೇಖನ ಸಂಗ್ರಹ)
2007 – ಡಯಾನ (ಜೀವನಕಥೆ)
2007 – ಹಂತಕಿ ಐ ಲವ್ ಯೂ (ಅನುವಾದ)
2007 – ಬಡಾ ಬೆಡ್​ರೂಂ ಹತ್ಯಕಾಂಡ (ತನಿಖೆ)
2007 – ಖಾಸ್ ಬಾತ್ 2001
2007 – ರೇಷ್ಮೆ ರುಮಾಲು (ಅನುವಾದ)
2007 – ಮನಸೆ (ಆಡಿಯೋ)
2008 – ಖಾಸ್ ಬಾತ್ 2002
2008 – ಚಲಂ (ಜೀವನಕಥೆ)
2008 – ದಂಗೆಯ ದಿನಗಳು (ಅನುವಾದ)
2008 – ಡಿ ಕಂಪನಿ (ಕ್ರೈಮ್)
2009 – ನೀನಾ ಪಾಕಿಸ್ತಾನ
2009 – ಅವನೊಬ್ಬನಿದ್ದ ಗೋಡ್ಸೆ
2009 – ಮೇಜರ್ ಸಂದೀಪ್ ಹತ್ಯೆ
2009 – ಲವಲವಿಕೆ ಭಾಗ 3
2009 – ಬಾಟಂ ಐಟಂ ಭಾಗ 4
2009 – ಫಸ್ಟ್ ಹಾಫ್
2010 – ಕಾಮರಾಜ ಮಾರ್ಗ (ಕಾದಂಬರಿ)
2010 – ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು (ಕಾದಂಬರಿ)
2011 – ಬಾಟಂ ಐಟಂ ಭಾಗ 5, 6
2011 – ಲವಲವಿಕೆ ಭಾಗ 4
2011 – ಖಾಸ್ ಬಾತ್ 2003, 2004
2012 – ಕನಸೆ (ಆಡಿಯೋ)
2012 – ಉಡುಗೊರೆ (ಆಯ್ದ ಬರಹಗಳು)
2012 – ಹಿಮಾಗ್ನಿ (ಕಾದಂಬರಿ)
2012 – ಒಲವೆ (ಆಡಿಯೋ)
2012 – ಅಮ್ಮ ಸಿಕ್ಕಿದ್ಳು (ಕಾದಂಬರಿ)
2012 – ಕಲ್ಪನಾ ವಿಲಾಸ (ಜೀವನ ಕಥೆ)
2012 – ಖಾಸ್ ಬಾತ್ 2005
2012 – ರಂಗವಿಲಾಸ್ ಬಂಗಲೆಯ ಕೊಲೆಗಳು (ಕ್ರೈಮ್)
2012 – ಇದು ಜೀವ, ಇದುವೆ ಜೀವನ (ಜೀವನಕಥೆ)
2012 – ಪ್ರಮೋದ್ ಮಹಾಜನ್ ಹತ್ಯೆ (ಅನುವಾದ)
2013 – ಏನಾಯ್ತು ಮಗಳೆ (ಜೀವನಕಥೆ)
2013 – ಬಾಟಮ್ ಐಟಂ ಭಾಗ 7
2016 – ಆತ್ಮ (ಕಾದಂಬರಿ)
2016 – ಬಾಟಮ್ ಐಟಂ ಭಾಗ 8
2016 – ಸಮಾಧಾನ
2016 – ಖಾಸ್ ಬಾತ್ 2006
2016 – ರಾಜ್, ಲೀಲಾ, ವಿನೋದ್ (ಜೀವನ ಕಥೆ)
2016 – ಇಡ್ಲಿ ವಡಾ ಡೆಡ್ಲಿ ಮರ್ಡರ್ (ಕ್ರೈಮ್)

ಹಿಮಾಲಯನ್ ಬ್ಲಂಡರ್, ಕಂಪನಿ ಆಫ್ ವುಮೆನ್, ಕಾಮರಾಜ ಮಾರ್ಗ, ಡಿ ಕಂಪನಿ, ಭೀಮಾ ತೀರದ ಹಂತಕರು, ಪಾಪಿಗಳ ಲೋಕದಲ್ಲಿ ಇವು ಅವರ ಅತ್ಯಂತ ಜನಪ್ರಿಯ ಕೃತಿಗಳು.  ಕಾಮರಾಜ ಮಾರ್ಗ ಮತ್ತು ರಾಜ್ ಲೀಲಾ ವಿನೋದ್ ಕೃತಿಗಳು ವಿವಾದಗಳಿಗೂ ಎಡೆ ಮಾಡಿಕೊಟ್ಟಿದ್ದವು. ನೀ ಹಿಂಗ ನೋಡಬ್ಯಾಡ ನನ್ನ, ಹೇಳಿ ಹೋಗು ಕಾರಣ ಕಾಂದವರಿ ಯುವ ಮನಸ್ಸಿನಲ್ಲಿ ಸಂಚಲನವನ್ನೇ ಎಬ್ಬಿಸುತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss