Thursday, August 11, 2022

Latest Posts

ಕಾರವಾರ| ಆತಂಕದ ಮಧ್ಯೆ ಸಂಪೂರ್ಣ ಗುಣಮುಖರಾಗಿ ಮನೆಯತ್ತ ಹೆಜ್ಜೆ ಇಟ್ಟ ಭಟ್ಕಳ ಮೂಲದ 20 ಜನ

ಕಾರವಾರ : ಒಂದೆಡೆ ಕೊರೋನಾ ಪೀಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತ ಆತಂಕ ಸೃಷ್ಟಿಯಾಗುತ್ತಿದ್ದರೆ, ಶನಿವಾರ ಉ.ಕ ಜಿಲ್ಲೆ ಆಶಾದಾಯಕ ಪ್ರಸಂಗಕ್ಕೆ ಸಾಕ್ಷಿಯಾಯಿತು. ಕೊರೋನಾ ಪೀಡಿತರಾಗಿ ಕಾರವಾರದ ಕೋವಿಡ್ -೧೯ ವಾರ್ಡಿಗೆ ಚಿಕಿತ್ಸೆಗೆ ದಾಖಲಾಗಿದ್ದ ಭಟ್ಕಳ ಮೂಲದ ೨೦ ಜನರು ಸಂಪೂರ್ಣ ಗುಣಮುಖರಾಗಿದ್ದು, ಇವರನ್ನು ಶನಿವಾರ ಜಿಲ್ಲಾಡಳಿತ ಶುಭಕೋರಿ ಬೀಳ್ಕೊಟ್ಟಿದೆ. ಮತ್ತೆ ಆರೋಗ್ಯಪೂರ್ಣರಾಗಿ ಮನೆಯತ್ತ ಹೆಜ್ಜೆ ಇಟ್ಟ ಎಲ್ಲರ ಕಣ್ಣಂಚಿನಲ್ಲಿ ಆನಂದ ಭಾಷ್ಪ ಜಿನುಗುತ್ತಿತ್ತು.
ಸೋಂಕಿನಿಂದ ಗುಣಮುಖರಾದ ೬ ಜನ ಮಕ್ಕಳು, ೬ ಪುರುಷರು ಹಾಗೂ ೮ ಮಹಿಳೆಯರು ಸೇರಿ ಒಟ್ಟು ೨೦ ಜನರನ್ನು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ. ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಕುಡ್ತಕರ್ ಮತ್ತು ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯ್ಕ , ಇನ್ನಿತರ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪುಷ್ಪ ಗುಚ್ಛ ನೀಡಿ ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯಿಂದ ಬೀಳ್ಕೊಟ್ಟರು.
ಅಧೀರರಾಗದಿರಿ:
ಕೊರೋನಾ ಸೋಂಕು ಪೀಡಿತರು ಯಾವ ಕಾಲಕ್ಕೂ ಮಾನಸಿಕ ಆಘಾತಕ್ಕೆ ಒಳಗಾಗಬಾರದು. ಸೂಕ್ತ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ವಹಿಸಿದರೆ ಈ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಬಹುದು ಎನ್ನುವುದಕ್ಕೆ ಈ ೨೦ ಜನರೇ ಸಾಕ್ಷಿ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಹೇಳಿ, ಎಲ್ಲರಿಗೂ ಶುಭ ಕೋರಿದರು. ಮನೆಯತ್ತ ಹೆಜ್ಜೆ ಇಟ್ಟ ಗುಣಮುಖರಾದವರು ಜಿಲ್ಲಾಡಳಿತ ಮತ್ತು ವೈದ್ಯ ಸಿಬ್ಬಂದಿಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸಲು ಮರೆಯಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss