ಕಾರವಾರ| ಕದ್ದು ಮುಚ್ಚಿ ಬಂದರೆ ಕ್ರಿಮಿನಲ್ ಪ್ರಕರಣ: ಉ.ಕ ಜಿಲ್ಲಾ ಎಸ್ಪಿ ಖಡಕ್ ಎಚ್ಚರಿಕೆ

0
632

ಕಾರವಾರ : ಚೆಕ್‌ಪೋಸ್ಟ್‌ಗಳ ಮೂಲಕ ಯಾವುದೇ ಮಾಹಿತಿ ನೀಡದೇ ಕದ್ದು ಮುಚ್ಚಿ ಜಿಲ್ಲೆಗೆ ಬರುವ ಮತ್ತು ಅಂಥವರಿಗೆ ಸಹಕರಿಸುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡದೇ ಕದ್ದುಮುಚ್ಚಿ ಒಳಬರುವುದು ಗಂಭೀರ ಪ್ರಕರಣ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಇವರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ ಎಂದವರು ಆತಂಕ ವ್ಯಕ್ತಪಡಿಸಿದರು.
ಭಯ ಬೇಡ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ದಾಖಲಾದ ಎಲ್ಲ ಪ್ರಕರಣಗಳು ಹೊರಗಿನಿಂದ ಪ್ರಯಾಣದ ಇತಿಹಾಸವನ್ನು ಹೊಂದಿರುವುದರಿಂದ ಬಂದಿದ್ದು, ಅವುಗಳು ಈಗಾಗಲೇ ನಿರ್ಬಂಧಿತವಾಗಿದ್ದರಿಂದ ಭಯಪಡುವ ಅಗತ್ಯವಿಲ್ಲ. ಆದರೆ ಹೊರಗಿನಿಂದ ಜಿಲ್ಲೆಗೆ ಯಾವುದೇ ಮಾಹಿತಿ ನೀಡದೇ ಬರುವುದು ಜಿಲ್ಲೆಗೆ ಅಪಾಯವನ್ನುಂಟು ಮಾಡುವ ಕೃತ್ಯವಾಗಿದೆ. ಜನರು ಈ ಬಗ್ಗೆ ಎಚ್ಚರ ವಹಿಸಬೇಕು. ಅಂತಹ ಯಾವುದೇ ಪ್ರಕರಣಗಳನ್ನು ತಕ್ಷಣ ಅಧಿಕಾರಿಗಳಿಗೆ ವರದಿ ಮಾಡಬೇಕೆಂದು ತಿಳಿಸಿದ್ದಾರೆ.
ಮೇ ೩೧ ರವರೆಗೂ ಶಾಲಾ ಕಾಲೇಜು ಪ್ರಾರಂಭಿಸಲಾಗುವದಿಲ್ಲ. ಜನರು ಅನಗತ್ಯವಾಗಿ ಓಡಾಡಬಾರದು, ಪೊಲೀಸ್ ಇಲಾಖೆಯಿಂದ ದ್ರೋಣ ಕ್ಯಾಮೆರಾ ಮೂಲಕ ಸಾರ್ವಜನಿಕ ಚಲನವಲನಗಳನ್ನು ಸೆರೆ ಹಿಡಿಯಲಾಗುತ್ತಿದ್ದು, ನಿಷೇಧಾಜ್ಞೆಯನ್ನು ಉಲ್ಲಂಘಿಸುವರ ಮೇಲೆ ಕೇಸ್ ಬುಕ್ ಮಾಡಲಾಗುವುದು ಎಂದರು.
ಕಳೆದ ಮೂರು ದಿನಗಳಿಂದ ದೃಢಪಡುತ್ತಿರುವ ಪ್ರಕರಣಗಳು ಹೊರ ರಾಜ್ಯಗಳಿಂದ ವಿಶೇಷವಾಗಿ ಮುಂಬಯಿಯಿಂದ ಬಂದವರಲ್ಲೇ ಬರುತ್ತಿದ್ದು, ಇದು ಜಿಲ್ಲೆಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಇದರ ಮಧ್ಯೆ ನಿತ್ಯ ನೂರಾರು ಜನ ಜಿಲ್ಲೆಗೆ ಬರುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವರೀಷ್ಠರ ಈ ಹೇಳಿಕೆ ಮಹತ್ವ ಪಡೆದಿದೆ.

LEAVE A REPLY

Please enter your comment!
Please enter your name here