Tuesday, June 28, 2022

Latest Posts

ಕಾರು ಅಡ್ಡಗಟ್ಟಿ 15 ಲಕ್ಷ ರೂ. ದರೋಡೆ ಪ್ರಕರಣ: ದೂರುದಾರನೇ ಆರೋಪಿ !

ಹೊಸ ದಿಗಂತ ವರದಿ, ಶಿವಮೊಗ್ಗ:

ಸೊರಬ ತಾಲ್ಲೂಕಿನ ಕೊರಕೋಡು ಗ್ರಾಮದ ಸಮೀಪದ ಕಾರು ಅಡ್ಡಗಟ್ಟಿ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಶನಿವಾರ ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ.
ಸಾಗರ ಮೂಲದ ಅಡಿಕೆ ವರ್ತಕರಿಗೆ ಸೇರಿದ ಸುಮಾರು 15 ಲಕ್ಷ ರೂ.ಗಳನ್ನು ಮಹಾರಾಷ್ಟ್ರದ ಸೊಲ್ಲಾಪುರದಿಂದ ತರುತ್ತಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಕೊರಕೋಡು ಸಮೀಪದ ಕ್ರಾಸ್‍ನಲ್ಲಿ ಕಾರನ್ನು ಅಡ್ಡಗಟ್ಟಿದ ದರೋಡೆಕೋರರ ಗುಂಪು, ಕಾರು ಚಾಲಕ ನಫೀಸ್ ಆಲಂ ಮತ್ತು ಅನ್ಸರ್ ಆಹ್ಮದ್ ಎಂಬುವರ ಮೇಲೆ ಹಲ್ಲೆ ನಡೆಸಿ 15 ಲಕ್ಷ ರೂ. ಹಣದ ಸಮೇತ ಕಾರನ್ನು ಕದ್ದೊಯ್ದಿದ್ದಿದ್ದರು. ಕಾರು ಚಾಲಕ ನಫೀಸ್ ಆಲಂ ನೀಡಿದ ದೂರಿನನ್ವಯ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕ್ಷಿಪ್ರ ಕಾರ್ಯಾಚರಣೆ ..
ಪ್ರಕರಣ ದಾಖಲಾಗುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಹಾಗೂ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಟೇಕಣ್ಣನವರ್ ಹಾಗೂ ಶಿಕಾರಿಪುರ ಎಎಸ್‍ಪಿ ಅದ್ದೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಕಾರ್ಯಪ್ರವೃತರಾದ ಸೊರಬ ಪಿಎಸ್‍ಐ ಟಿ.ಬಿ. ಪ್ರಶಾಂತ್ ಕುಮಾರ್, ಆನವಟ್ಟಿ ಪಿಎಸ್‍ಐ ಡಬ್ಲು. ಪ್ರವೀಣಕುಮಾರ್ ಹಾಗೂ ಶಿಕಾರಿಪುರ ಸಿಪಿಐ ಗುರುರಾಜ ಮೈಲಾರ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು. ಆರೋಪಿಗಳಾದ ಸಾಗರದ ನಫೀಸ್ ಆಲಂ, ಕನ್ನಪ್ಪ ಮಹಾಬಲಪ್ಪ, ವಿಶ್ವನಾಥ ಮಂಜುನಾಥ್ ಅವರನ್ನು ಬಂಧಿಸಿ, 7.5 ಲಕ್ಷ ರೂ., ಸೇರಿದಂತೆ ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆಯಲಾಗಿದೆ.
ದೂರುದಾರನೇ ಆರೋಪಿ…!
ಘಟನೆಗೆ ಸಂಬಂಧಿಸಿ ದೂರುದಾರ ನಫೀಸ್ ಆಲಂ ಆರೋಪಿಯಾಗಿರುವುದು ವಿಶೇಷ. ತನಿಖೆ ವೇಳೆ ದರೋಡೆಕೋರರೊಂದಿಗೆ ನಫೀಸ್ ನಿಕಟ ಸಂಪರ್ಕ ಇರುವುದು ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯಲ್ಲಿ ಸೊರಬ ಸಿಪಿಐ ಆರ್.ಡಿ. ಮರುಳಸಿದ್ದಪ್ಪ ನೇತೃತ್ವದಲ್ಲಿ ಶಿಕಾರಿಪುರ ಸಿಪಿಐ ಗುರುರಾಜ ಮೈಲಾರ ತಂಡದಲ್ಲಿ ಕಾನ್ಸಟೇಬಲ್‍ಗಳಾದ ಪ್ರಶಾಂತ್, ಶಿವಕುಮಾರ್, ಆದರ್ಶ, ವಿನಯ್, ಸೊರಬ ಪಿಎಸ್‍ಐ ಟಿ.ಬಿ. ಪ್ರಶಾಂತ್ ಕುಮಾರ್ ತಂಡದಲ್ಲಿ ಕಾನ್ಸ್‍ಟೇಬಲ್‍ಗಳಾದ ಸಲ್ಮಾಖಾನ್ ಹಾಜಿ, ದಿನೇಶ್, ಜಗದೀಶ್, ಆನವಟ್ಟಿ ಪಿಎಸ್‍ಐ ಡಬ್ಲು. ಪ್ರವೀಣ್ ಕುಮಾರ್ ತಂಡದಲ್ಲಿ ಕಾನ್ಸ್‌ಟೇಬಲ್ ಗಳಾದ ಗಿರೀಶ್, ಟೀಕಪ್ಪ, ತಿರುಕಪ್ಪ, ಜಗದೀಶ್ ಉಪ್ಪಾರ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss