Sunday, June 26, 2022

Latest Posts

ಕಾರು ಬಿಟ್ಟು ರಿಕ್ಷಾ ಏರಿದ ರಾಜೇಶ್ ನ್ಯಾಕ್: ಶಾಸಕರ ಸರಳತೆಗೆ ಸಿಕ್ಕಿತು ವ್ಯಾಪಕ ಪ್ರಶಂಸೆ

ಬಂಟ್ವಾಳ:  ದಿನವಿಡೀ ಬಂಟ್ವಾಳ ತಾಲೂಕಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಿ  ಕಡೇಶಿವಾಲಯ ಗ್ರಾಮದೆಡೆ ಹೊರಟ ಬಂಟ್ವಾಳದ ಶಾಸಕ ರಾಜೇಶ್ ನ್ಯಾಕ್ ಅವರು, ಬಿಜೆಪಿಯ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಸೇರಿಕೊಂಡು ಅಲ್ಲಿಂದ ಮತ್ತೆ ಗ್ರಾಮದ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸಕ್ಕೆ ತೆರಳಲು ಸಿದ್ದತೆ ನಡೆಸಿ ತನ್ನ ‘ರಥ’ ವೇರಲು ಬರುತಿದ್ದಂತೆ ಕಂಡದ್ದು ಶಾಸಕರಿಂದ ಸ್ವಯಂ ಉದ್ಯೋಗ ಯೋಜನೆಯಡಿ ಆಟೋ‌ ಪಡೆದ ಮೋಹನ್ ನಾಯ್ಕ್.‌
ಇವರು ತನ್ನ ಆಟೋ ರಿಕ್ಷಾ ತೋರಿಸುತಿದ್ದಂತೆ ತನ್ನ ರಥ ಬಿಟ್ಟ ಶಾಸಕರು ಮೋಹನ್ ರಥವೇರಿ ಶಿಲಾನ್ಯಾಸದ ಕಡೆ ಪಯಣ ಬೆಳಸಿದರು. ಭಾನುವಾರ ರಿಕ್ಷಾ ಚಾಲಕ ಮೋಹನ್ ನಾಯ್ಕ್ ಸಾಮಾಜಿಕ ಜಾಲಾತಾಣದಲ್ಲಿ  ಹೀರೊ ಆಗಿ ಬಿಂಬಿತವಾದರೆ, ಶಾಸಕ ರಾಜೇಶ್ ನ್ಯಾಕ್ ಅವರ ಸರಳತೆ ಮತ್ತೆ ಮತ್ತೆ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss