Tuesday, July 5, 2022

Latest Posts

ಕಾರು-ಬೈಕ್ ಡಿಕ್ಕಿ: ತಂದೆ, ಮಗಳ ಸಾವು

ಹೊಸದಿಗಂತ ವರದಿ, ವಿಜಯಪುರ: 

ಕಾರು ಹಾಗೂ ಬೈಕ್ ಡಿಕ್ಕಿಯಾಗಿ ತಂದೆ, ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಯುಕೆಪಿಯಿಂದ ಬಸವನಬಾಗೇವಾಡಿ ಹೋಗುವ ಮಾರ್ಗದ ಬನ್ನಿ ಹಳ್ಳದ ಕ್ರಾಸ್ ಹತ್ತಿರ ಸೋಮವಾರ ಸಂಭವಿಸಿದೆ.
ಮೃತಪಟ್ಟವರನ್ನು ಮೂಲತಃ ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದ ಧರೆಪ್ಪ ಅರವಿಂದ ಶಿವನ್ನವರ (28) ಹಾಗೂ ಈತನ ಮೂರು ವರ್ಷದ ಮಗಳಾದ ಸಾನ್ವಿಕಾ ಎಂದು ಗುರುತಿಸಲಾಗಿದೆ.
ಧರೆಪ್ಪ ಶಿವನ್ನವರ ಈತನು ತನ್ನ ಮಗಳಾದ ಸಾನ್ವಿಕಾಳೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss