Wednesday, July 6, 2022

Latest Posts

ಕಾರ್ಕಳ ಗ್ರಾ. ಪಂ.ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ ಮತದಾರರು

ಹೊಸದಿಗಂತ ವರದಿ,ಉಡುಪಿ:

ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ ತೆರೆದ ಎರಡು ಮತಗಟ್ಟೆಗಳಲ್ಲಿ ಬೆಳಗ್ಗೆ 10.45ರ ಸುಮಾರಿಗೆ ತಲಾ ಶೇ. 36 ಮತ್ತು ಶೇ. 34ರಷ್ಟು ಮತದಾನ ದಾಖಲಾಗಿದೆ.

ಯರ್ಲಪಾಡಿ ಗ್ರಾ.ಪಂ. ವ್ಯಾಪ್ತಿಯ ಕಾಂತರಗೋಳಿ ಸ.ಕಿ.ಪ್ರಾ. ಶಾಲೆಯಲ್ಲಿ ಎರಡು ಮತಗಟ್ಟೆಗಳನ್ನು ತೆರೆಯಲಾಗಿದೆ. ಒಂದರಲ್ಲಿ 688 ಮತದಾರರಿದ್ದು, 11ಗಂಟೆ ವೇಳೆಗೆ 215 ಮಂದಿ ಅಂದರೆ ಶೇ. 31.25ರಷ್ಟು ಮತ ಚಲಾಯಿಸಿದ್ದಾರೆ. ಇನ್ನೊಂದು ಮತಗಟ್ಟೆಯಲ್ಲಿ 693 ಮತದಾರರಿದ್ದು, ಈಗಾಗಲೇ 171 ಮಂದಿ ಮತದಾನ ಮಾಡಿದ್ದಾರೆ. ಈಗಾಗಲೇ ಶೇ.24.67ರಷ್ಟು ಮತ ಚಲಾವಣೆಯಾಗಿದೆ‌.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss