Thursday, July 7, 2022

Latest Posts

ಕಾರ್ಗಿಲ್​ ವಿಜಯ್​ ದಿವಸ: 11,649 ಅಡಿ ಎತ್ತರದಲ್ಲಿ ಬೈಕ್​ ರ‍್ಯಾಲಿ ನಡೆಸಿದ ಭಾರತೀಯ ಸೇನೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಾರ್ಗಿಲ್​ ವಿಜಯ್​ ದಿವಸ ಅಂಗವಾಗಿ ಭಾರತೀಯ ಸೇನೆ ಕಾಶ್ಮೀರದ ಕಣಿವೆ ಹಾಗೂ ಲಡಾಖ್​​ನ ಕಡಿದಾಗಿರುವ ಪರ್ವತ ಶ್ರೇಣಿಯಲ್ಲಿ 11,649 ಅಡಿಯಷ್ಟು ಎತ್ತರದಲ್ಲಿ ಎರಡು ಬೈಕ್​ ರ‍್ಯಾಲಿಗಳನ್ನು ನಡೆಸಿದೆ.ಈ ಮೂಲಕ ಕಾರ್ಗಿಲ್​ ಯುದ್ಧ ಸ್ಮಾರಕದಲ್ಲಿನ ಹುತಾತ್ಮ ಭಾರತೀಯ ಸೇನೆ ಯೋಧರಿಗೆ ನಮನ ಸಲ್ಲಿಸಿದ್ದಾರೆ.
ರ‍್ಯಾಲಿ ಆರಂಭದ ಕುರಿತು ಟ್ವಿಟರ್​ನಲ್ಲಿ ವಿಡಿಯೋ ವೈರಲ್​ ಆಗಿದೆ. ಒಂದು ಬೈಕ್ ​ರ‍್ಯಾಲಿ ಮುನ್ನಡಿಸಿದ, ಕಾರ್ಗಿಲ್​ ಹೀರೋ, ಉತ್ತರ ಸೈನ್ಯದ ಕಮಾಂಡರ್​ ಲೆಫ್ಟಿನಂಟ್​ ಜನರಲ್​ ವೈ.ಕೆ. ಜೋಶಿ ಹೇಗಿದೆ ಜೋಶ್​ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉಳಿದ ಯೋಧರು ಹೈ ಸರ್​ ಎಂದು ಉತ್ತರ ಕೊಟ್ಟಿದ್ದು, ಅದೀಗ ಸಹಸ್ರಾರು ಮಂದಿಯ ಹೃದಯ ಗೆದ್ದಿದೆ.
11,649 ಅಡಿಯಲ್ಲಿರುವ ಭಯಾನಕ ಜೋಜಿಲಾ ಪಾಸ್​ನ್ನು ಬೈಕ್​ ಸವಾರರು ದಾಟಲಿದ್ದಾರೆ. ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದ್ದು ಆರ್ಮಿ ಕಮಾಂಡರ್​ ತಂಡವನ್ನ ಮುನ್ನಡೆಸೋದು ಅಂದರೆ ಜೋಶ್​ ಹೆಚ್ಚಾಗಿಯೇ ಇರಬೇಕು ಎಂದು ಶೀರ್ಷಿಕೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss