Monday, September 28, 2020
Monday, September 28, 2020

Latest Posts

ಕೃಷಿ ಮಸೂದೆ ವಿರೋಧಿಸಿ ಇಂಡಿಯಾ ಗೇಟ್ ನಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಹೊಸದಿಲ್ಲಿ: ದೆಹಲಿಯ ಇಂಡಿಯಾ ಗೇಟ್ ಹತ್ತಿರ ಕೃಷಿ ಮಸೂದೆ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬೆಂಕಿ ನಂದಿಸಲು ಪೊಲೀಸರ ತಂಡ...

ಕರ್ನಾಟಕ ಬಂದ್ ಗೆ ರಾಮನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಇಂದು ನಡೆದ ಬಂದ್ ಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು ಬೆಳಿಗ್ಗೆ 10 ಗಂಟೆಗೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಎ. ಪಿ. ಎಂ ಸಿ ಆವರಣದಲ್ಲಿ ಸೇರಿ...

ತ್ರಿಬಲ್ ರೈಡ್ ಗೆ ಹೊರಟ ಜೊತೆ-ಜೊತೆಯಲಿ ಮೇಘಾ ಶೆಟ್ಟಿ, ಅದು ಯಾವುದು ಗೊತ್ತಾ?

ಜೊತೆ-ಜೊತೆಯಲಿ ಧಾರಾವಾಹಿನಟಿ  ಅನು  ಪಾತ್ರಧಾರಿ  ಮೇಘಾ  ಶೆಟ್ಟಿಗೆ  ಹೆಚ್ಚು  ಜನಪ್ರಿಯ  ಪಡೆದಿದ್ದರು.  ಆದರೆ  ಅವರಿಗೆ  ಈಗ  ಅದೃಷ್ಟ   ಒಲಿದು ಬಂದಿದೆ.ನಟಿಯಾಗಿ ಗುರುತಿಸಿಕೊಂಡ ಕಡಿಮೆ ಅವಧಿಯಲ್ಲಿಯೇ ಅವರಿಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಬಡ್ತಿ ದೊರೆತಿದೆ. ಸ್ಟಾರ್...

ಕಾರ್ಗಿಲ್ ಸಮರಕ್ಕೆ 21 ವರುಷ | ಅಮರ ಸೇನಾನಿಗಳಿಗೆ ಇದೋ ಸಲಾಂ!

ಸುರೇಶ್ ಡಿ. ಪಳ್ಳಿ

ಮಂಗಳೂರು: ಜುಲೈ 26 ಬಂತೆಂದರೆ ಕಾರ್ಗಿಲ್ ನೆನಪಾಗುತ್ತದೆ. ಸಾವಿರಾರು ಯೋಧರು ತಮ್ಮ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡಿದ್ದಾರೆ. ಭಾರತದ ಯೋಧರ ದಿಟ್ಟ ಪ್ರತ್ಯುತ್ತರಕ್ಕೆ ಪಾಕ್ ಸೈನಿಕರು ಪತರಗುಟ್ಟಿ ಹೋಗಿದ್ದು ಈಗ ಇತಿಹಾಸ. ಈ ಯುದ್ಧ ನಡೆದು 21 ವರ್ಷಗಳು ಗತಿಸಿದರೂ ಇಂದಿಗೂ ಆ ಕ್ಷಣವನ್ನು ಯುದ್ಧದಲ್ಲಿ ಪಾಲ್ಗೊಂಡ ಯೋಧರು ನೆನಪಿಸಿಕೊಳ್ಳುತ್ತಾರೆ. ಭಾರತದ ತ್ರಿವರ್ಣ ಧ್ವಜ ಶಿಖರದ ಉತ್ತುಂಗದಲ್ಲಿ ಹಾರಾಡಿದ ಆ ಕ್ಷಣವನ್ನು ಆನಂದ ತುಂದಿಲರಾಗುತ್ತಾರೆ.
ಕಾರ್ಗಿಲ್ ಯುದ್ಧದಲ್ಲಿ  ಕರುನಾಡು ಸೇರಿದಂತೆ ಕರಾವಳಿಯ ಹಲವು ಮಂದಿ ಪಾಲ್ಗೊಂಡಿದ್ದರು ಎಂಬುದು ಹೆಮ್ಮೆಯ ವಿಷಯ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 244 ಹೆವಿ ಮೋರ್ಟಾರ್ ರೆಜಿಮೆಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರಿನ ಕುಂಪಲ ನಿವಾಸಿ ಪ್ರವೀಣ್ ಶೆಟ್ಟಿ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದಾರೆ. ಅವರ ಅನುಭವದ ಮಾತುಗಳು ಇಲ್ಲಿವೆ.

ಆ ಕ್ಷಣ ಕಣ್ಣಿಗೆ ಕಟ್ಟಿದಂತಿದೆ
ನನ್ನ 18ನೆಯ ವರ್ಷದಲ್ಲಿಯೇ ಸೇನೆ ಸೇರಿದ್ದೆ. ಎರಡು ವರ್ಷದಲ್ಲಿಯೇ ಕಾರ್ಗಿಲ್ ಯುದ್ಧ ನಡೆಯಿತು. ಊರಿಗೆ ಬಂದಿದ್ದ ನನಗೆ ಕರ್ತವ್ಯಕ್ಕೆ ಹಾಜರಾಗಲು ಕರೆ ಬಂತು ತಕ್ಷಣವೇ ನಾನು ಕರ್ತವ್ಯಕ್ಕೆ ತೆರಳಿದ್ದೆ.
ಮನೆಗೆ ಬಂದ ದಿನವೇ ಹೊರಡುವ ಅನಿವಾರ್ಯ ಎದುರಾಗಿತ್ತು. ಆದರೂ ಎದೆಗುಂದದೆ ದೇಶದ ಕರೆಗೆ ಓಗೊಟ್ಟು ಅಣಿಯಾಗಿದ್ದು. ಹೋದ ತಕ್ಷಣ ನಾನು ನೋಡಿದ್ದೇ ಹೆಣಗಳ ರಾಶಿ. ತನ್ನ ರೆಜಿಮೆಂಟ್‌ನಲ್ಲಿದ್ದವರ ಛಿದ್ರ ಛಿದ್ರವಾದ ದೇಹಗಳನ್ನು ನೋಡಿ ಮನ ಘಾಸಿಗೊಂಡಿತ್ತು. ಆದರೆ ಕರ್ತವ್ಯ ಮರೆಯದೆ ಸೂಚನೆಯಂತೆ ನಾನೂ ಯುದ್ಧದಲ್ಲಿ ಪಾಲ್ಗೊಂಡಿದ್ದೆ. ಆ ಕ್ಷಣವಿನ್ನೂ ನನ್ನ ಕಣ್ಣ ಮುಂದೆ ಇದೆ ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಪ್ರವೀಣ್ ಶೆಟ್ಟಿ.
16 ದಿನ ಕೆಚ್ಚೆದೆಯ ಹೋರಾಟ
ಯುದ್ದ ಮುಂದುವರಿದೇ ಇತ್ತು. 16 ದಿನ ಅನ್ನಾಹಾರ ಯಾವುದೂ ಸರಿಯಾಗಿ ಇರಲಿಲ್ಲ. ಸ್ನಾನದ ಮಾತೇ ಇರಲಿಲ್ಲ. ಯುದ್ಧ ಭೂಮಿಯ ಅತೀ ಮುಖ್ಯಭಾಗದ ಕಾರ್ಗಿಲ್ ನ ತೊಲೊಲಿಂಗ್ ಪ್ರದೇಶದವರೆಗೆ ತಲುಪಿದ್ದೆವು. ನನ್ನ ಕಣ್ಣೆದುರೇ ಹೆಣಗಳು ಉರುಳುತ್ತಿದ್ದವು. ನಮ್ಮ ತಂಡ ಕೆಚ್ಚೆದೆಯಿಂದ ಹೋರಾಡಿ ೪೯ ಮಂದಿಯನ್ನು  ಹೊಡೆದುರುಳಿಸಿತ್ತು. ಕೇವಲ ತೊಲೊಲಿಂಗ್ ಪರ್ವತ ಮಾತ್ರವಲ್ಲ ಟೈಗರ್ ಹಿಲ್ ಮುಂತಾದ ಪರ್ವತ ಶ್ರೇಣಿಗಳಲ್ಲೂ ನಮ್ಮ ತಂಡ ಹೋರಾಟ ಮುಂದುವರಿಸಿತ್ತು.ದೇಶಕ್ಕಾಗಿ ಹೋರಾಡಿದ  ಹೆಮ್ಮೆ ನನಗಿದೆ ಎಂದು ಮಾತು ಮುಂದುವರಿಸಿದರು ಪ್ರವೀಣ್ ಶೆಟ್ಟಿ.
11 ವರ್ಷ ಕಾಶ್ಮೀರದಲ್ಲಿಯೇ ಸೇವೆ
16 ವರ್ಷಗಳ ಕಾಲ ದೇಶ ಸೇವೆ ಮಾಡಿರುವ ಪ್ರವೀಣ್ ಶೆಟ್ಟಿಯವರು ತಮ್ಮ 11 ವರ್ಷಗಳ ಅವಧಿಯನ್ನು  ಕಾಶ್ಮೀರದಲ್ಲೇ ಕಳೆದಿದ್ದಾರೆ. ಇವರ ಸೇವೆಗೆ 8 ಸೇನಾ ಸೇವಾ ಪದಕಗಳು ಸಂದಿವೆ. ಫೀಲ್ಡ್ ಸೇನಾ ಪದಕ, ಡಬಲ್ ಫೀಲ್ಡ್ ಸೇನಾ ಪದಕ, ಆಪರೇಷನ್ ವಿಜಯ್, ಆಪರೇಷನ್ ರಕ್ಷಕ್,ಆಪರೇಷನ್ ಪರಾಕ್ರಮ್,ಆಪರೇಷನ್ ವಿಜಯ್ ಸ್ಟಾರ್ ಸೇರಿದಂತೆ ಹಲವು ಪದಕಗಳು ಇವರ ಸೇವೆಗೆ ಸಂದಿವೆ.

ಈಗ ಬ್ಯಾಂಕ್ ಉದ್ಯೋಗಿ
‘ಕಾರ್ಗಿಲ್ ಯುದ್ಧ ನಡೆದು 21ವರ್ಷಗಳೇ ಸಂದಿವೆ. ಆದರೆ ಜುಲೈ ಬಂದಾಗ  ಕಾರ್ಗಿಲ್ ಮತ್ತೆ ನೆನಪಾಗುತ್ತದೆ. ಈ ಯುದ್ಧದ ಮೂಲಕ ಭಾರತ ಮಾತೆಗೆ ವಿಜಯದ ತಿಲಕವಿಟ್ಟ ವೀರ ಸೇನಾನಿಗಳ ನೆನಪಾಗುತ್ತದೆ. ಈ ಯುದ್ಧದಲ್ಲಿ ಪಾಲ್ಗೊಂಡಿರುವ ಸಾವಿರಾರು ಮಂದಿಯಲ್ಲಿ ಕುಂಪಲದ ಯೋಧ ಪ್ರವೀಣ್ ಶೆಟ್ಟಿಯವರೂ ಒಬ್ಬರು. 16 ವರ್ಷಗಳ  ಕಾಲ ಸೇನೆಯಲ್ಲಿ ಸೇವೆ ಮಾಡಿರುವ  ಪ್ರವೀಣ್ ಶೆಟ್ಟಿಯವರು ಸದ್ಯ ಮಂಗಳೂರಿನ ಬಲ್ಮಠದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಕೃಷಿ ಮಸೂದೆ ವಿರೋಧಿಸಿ ಇಂಡಿಯಾ ಗೇಟ್ ನಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಹೊಸದಿಲ್ಲಿ: ದೆಹಲಿಯ ಇಂಡಿಯಾ ಗೇಟ್ ಹತ್ತಿರ ಕೃಷಿ ಮಸೂದೆ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬೆಂಕಿ ನಂದಿಸಲು ಪೊಲೀಸರ ತಂಡ...

ಕರ್ನಾಟಕ ಬಂದ್ ಗೆ ರಾಮನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಇಂದು ನಡೆದ ಬಂದ್ ಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು ಬೆಳಿಗ್ಗೆ 10 ಗಂಟೆಗೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಎ. ಪಿ. ಎಂ ಸಿ ಆವರಣದಲ್ಲಿ ಸೇರಿ...

ತ್ರಿಬಲ್ ರೈಡ್ ಗೆ ಹೊರಟ ಜೊತೆ-ಜೊತೆಯಲಿ ಮೇಘಾ ಶೆಟ್ಟಿ, ಅದು ಯಾವುದು ಗೊತ್ತಾ?

ಜೊತೆ-ಜೊತೆಯಲಿ ಧಾರಾವಾಹಿನಟಿ  ಅನು  ಪಾತ್ರಧಾರಿ  ಮೇಘಾ  ಶೆಟ್ಟಿಗೆ  ಹೆಚ್ಚು  ಜನಪ್ರಿಯ  ಪಡೆದಿದ್ದರು.  ಆದರೆ  ಅವರಿಗೆ  ಈಗ  ಅದೃಷ್ಟ   ಒಲಿದು ಬಂದಿದೆ.ನಟಿಯಾಗಿ ಗುರುತಿಸಿಕೊಂಡ ಕಡಿಮೆ ಅವಧಿಯಲ್ಲಿಯೇ ಅವರಿಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಬಡ್ತಿ ದೊರೆತಿದೆ. ಸ್ಟಾರ್...

ಕರ್ನಾಟಕ ಬಂದ್: ತುಮಕೂರಿನಲ್ಲಿ ನೀರಸ ಪ್ರತಿಕ್ರಿಯೆ

ತುಮಕೂರು :ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ತುಮಕೂರು ನಗರದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲ್ಲೇ ಬಸ್, ಆಟೋ ಹಾಗೂ ವಾಹನ...

Don't Miss

ಕೃಷಿ ಮಸೂದೆ ವಿರೋಧಿಸಿ ಇಂಡಿಯಾ ಗೇಟ್ ನಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಹೊಸದಿಲ್ಲಿ: ದೆಹಲಿಯ ಇಂಡಿಯಾ ಗೇಟ್ ಹತ್ತಿರ ಕೃಷಿ ಮಸೂದೆ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬೆಂಕಿ ನಂದಿಸಲು ಪೊಲೀಸರ ತಂಡ...

ಕರ್ನಾಟಕ ಬಂದ್ ಗೆ ರಾಮನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಇಂದು ನಡೆದ ಬಂದ್ ಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು ಬೆಳಿಗ್ಗೆ 10 ಗಂಟೆಗೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಎ. ಪಿ. ಎಂ ಸಿ ಆವರಣದಲ್ಲಿ ಸೇರಿ...

ತ್ರಿಬಲ್ ರೈಡ್ ಗೆ ಹೊರಟ ಜೊತೆ-ಜೊತೆಯಲಿ ಮೇಘಾ ಶೆಟ್ಟಿ, ಅದು ಯಾವುದು ಗೊತ್ತಾ?

ಜೊತೆ-ಜೊತೆಯಲಿ ಧಾರಾವಾಹಿನಟಿ  ಅನು  ಪಾತ್ರಧಾರಿ  ಮೇಘಾ  ಶೆಟ್ಟಿಗೆ  ಹೆಚ್ಚು  ಜನಪ್ರಿಯ  ಪಡೆದಿದ್ದರು.  ಆದರೆ  ಅವರಿಗೆ  ಈಗ  ಅದೃಷ್ಟ   ಒಲಿದು ಬಂದಿದೆ.ನಟಿಯಾಗಿ ಗುರುತಿಸಿಕೊಂಡ ಕಡಿಮೆ ಅವಧಿಯಲ್ಲಿಯೇ ಅವರಿಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಬಡ್ತಿ ದೊರೆತಿದೆ. ಸ್ಟಾರ್...
error: Content is protected !!