Wednesday, August 10, 2022

Latest Posts

ಕಾರ್ಮಿಕರ ಪ್ರತಿಭಟನೆ: ಅಧಿಕಾರಿಯೇ ಮಾಡಿದರು ಟ್ರ್ಯಾಕ್ಟರ್ ಚಲಾಯಿಸಿ ಕಸ ವಿಲೇವಾರಿ!

ಹಾವೇರಿ: ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕಾರ್ಮಿಕರು ಪ್ರತಿಭಟನೆ ಮಾಡುತ್ತಿರುವುದರಿಂದ ಅಧಿಕಾರಿಯೇ ಟ್ರ್ಯಾಕ್ಟರ್ ಚಲಾಯಿಸಿ ಕಸ ವಿಲೇವಾರಿ ಮಾಡಿದ್ದಾರೆ.
ಗುರುವಾರ ನಗರದ ಪ್ರಮುಖ ರಸ್ತೆಯಲ್ಲಿರುವ ಕಸವನ್ನಾದರೂ ಸಾಗಿಸಿ ನೋಡುಗರಿಗಾದರೂ ನಗರ ಸ್ವಚ್ಛವಾಗಿ ಕಾಣುವಂತೆ ಮಾಡುವುದಕ್ಕೆ ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ಅವರೆ ಟ್ರ್ಯಾಕ್ಟರ್ ಚಲಾಯಿಸಿ ಕಸ ವಿಲೇವಾರಿ ಮಾಡಿದ್ದಾರೆ.
ಕಾರಣ: ನಗರಸಭೆಯಲ್ಲಿ ೯೦ ಅಧಿಕ ಕಾರ್ಮಿಕರು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಇವರಲ್ಲಿ ೨೨ ಚಾಲಕರನ್ನು ಮಾತ್ರ ನೇರ ನೇಮಕಾತಿ ಮತ್ತು ನೇರ ವೇತನಕ್ಕೆ ಪರಿಗಣಿಸದೇ ಇದ್ದುದರಿಂದ ನಮ್ಮನ್ನು ಇದೇ ರೀತಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಈ ಕಾರ್ಮಿಕರು ಕೆಲಸಕ್ಕೆ ಬಾರದೇ ಪ್ರತಿಭಟನೆ ಮಾಡುತ್ತಿರುವುದರಿಂದ ನಗರಸಭೆ ವಾಹನಗಳಿಗೆ ಚಾಲಕರಿಲ್ಲದಂತಾಗಿರುವ ಕಾರಣಕ್ಕೆ ಮುಂಜೋಜಿ ಅವರು ಟ್ರ್ಯಾಕ್ಟರ ಚಲಾಯಿಸುವಂತಾಗಿದೆ.
ನಗರದ ತುಂಬೆಲ್ಲ ರಾಸಿ ರಾಸಿ ಬಿದ್ದಿರುವ ಕಸವನ್ನು ವಿಲೇವಾರಿ ಮಾಡುವಂತೆ ಸಾರ್ವಜನಿಕರ ಒತ್ತಾಯ ಅಧಿಕವಾಗಲಾರಂಭಿಸಿದ್ದರಿಂದ ಬೇರೆ ದಾರಿ ಇಲ್ಲದೆ ಅಧಿಕಾರಿನೇ ಟ್ರ್ಯಾಕ್ಟರ ಚಲಾಯಿಸಿ ಕಸ ವಿಲೇವಾರಿ ಮಾಡಿದ್ದಾರೆ.
ಪ್ರತಿಭಟನೆ ಮಾಡುತ್ತಿರುವ ೨೨ ಕಾರ್ಮಿಕರು ಹೊರಗುತ್ತಿಗೆ ಪೌರಕಾರ್ಮಿಕರಾಗಿದ್ದು ಇವರಾರೂ ನಗರಸಭೆಯ ಅಧಿಕೃತ ವಾಹನ ಚಾಲಕರಲ್ಲ. ಇವರು ಹೊರಗುತ್ತಗೆ ಪೌರಕಾರ್ಮಿಕರಾಗಿದ್ದು, ಇವರಿಗೆ ವಾಹನ ಚಾಲನೆ ಬರುತ್ತದೆ ಎನ್ನುವ ಕಾರಣಕ್ಕೆ ಮಾತ್ರ ಇವರು ನಗರಸಭೆಯಲ್ಲಿನ ೨೧ ಕಸವಿಲೆವಾರಿ ವಾಹನಗಳನ್ನು ಚಲಾಯಿಸುತ್ತಾ ಬಂದಿದ್ದರು. ಇವರು ವಾಹನ ಚಲಾಯಿಸುತ್ತಿದ್ದ ಕಾರಣವನ್ನು ನೀಡಿ ಇವರನ್ನು ಚಾಲಕರೆಂದು ಪರಿಗಣಿಸುವಂತೆ ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿರುವ ಕಾರಣಕ್ಕೆ ಇವರ ನೇರ ನೇಮಕಕ್ಕೆ ಅಡ್ಡಿಯಾಗಿದೆ.
ಈ ಕಾರ್ಮಿಕರ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಣೆ ಮಾಡಿ ಕಸ ವಿಲೇವಾರಿ ಮಾಡುವ ವಾಹನಗಳು ಮತ್ತೆ ಸಾಗುವಂತೆ ಮಾಡಿ ನಗರದಲ್ಲಿ ಬಿದ್ದಿರುವ ರಾಶಿ ರಾಶಿ ವಿಲೇವಾರಿಗೆ ಅವಕಾಶ ಮಾಡುವ ಮೂಲಕ ಅಧಿಕಾರಿಗಳಿಗೆ ನಿಗದಿಯಾದ ಕೆಲಸವನ್ನು ಮಾಡುವುದರೊಂದಿಗೆ ಚಾಲಕ ಕೆಲಸದಿಂದ ಮುಕ್ತಿ ದೊರೆಯುವಂತೆ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss