Thursday, August 18, 2022

Latest Posts

ಕಾರ್ಮಿಕ ಭವನ‌ ಕಾಮಗಾರಿ ವೀಕ್ಷಿಸಿದ ಸಚಿವ ಶಿವರಾಮ ಹೆಬ್ಬಾರ್ : ಹೆಚ್ಚುವರಿಯಾಗಿ ಒಂದು ಅಂತಸ್ತು ನಿರ್ಮಿಸಲು ಸೂಚನೆ

ಹುಬ್ಬಳ್ಳಿ: ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಹುಬ್ಬಳ್ಳಿ ಚೈತನ್ಯ ನಗರದಲ್ಲಿ ನಿರ್ಮಿಸಲಾಗುತ್ತಿರುವ ಕಾರ್ಮಿಕ ಭವನ‌ ಕಾಮಗಾರಿ ವೀಕ್ಷಣೆ ಮಾಡಿದರು. ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ.6.5 ಕೋಟಿ ವೆಚ್ಚದಲ್ಲಿ G+2 ಕಟ್ಟಡ ನಿರ್ಮಿಸಲಾಗಿದೆ. 1.5 ಕೋಟಿ ವೆಚ್ಚದ ಅಗ್ನಿಶಾಮಕ ಸುರಕ್ಷತೆಯ ಅಳವಡಿಕೆ ಕಾರ್ಯಬಾಕಿ ಇದೆ. 2 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.ಇಲಾಖೆಯಡಿ ಬರುವ ಕಾರ್ಮಿಕರು, ಕಾರ್ಖಾನೆ, ಬಾಯ್ಲರಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯಕ್ಕೆ‌ ಸಂಬಂಧಿಸಿದಂತೆ ಕಚೇರಿಗಳು ಒಂದೇ ಕಟ್ಟಡದಲ್ಲಿ ಇರುವಂತೆ ಮಾದರಿಯಾಗಿ ಕಾರ್ಮಿಕ ಭವನ ನಿರ್ಮಾಣವಾಗಬೇಕು. ಹೆಚ್ಚುವರಿಯಾಗಿ ಒಂದು ಅಂತಸ್ತು ನಿರ್ಮಿಸಿ, ಜನವರಿ 1 ರ ಒಳಗಾಗಿ ಕಟ್ಟಡ ಉದ್ಘಾಟನೆಗೆ ಸಿದ್ದವಾಗಬೇಕು. ನೆಲ ಮಹಡಿಯಲ್ಲಿ ಕಾರ್ಮಿಕ ಸಹಾಯವಾಣಿ ಸ್ಥಾಪಿಸಿ ಅಗತ್ಯ ಮಾಹಿತಿಗಳನ್ನು ಕಾರ್ಮಿಕರಿಗೆ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ, ಬೆಳಗಾವಿ ಪ್ರಾದೇಶಿಕ ಕಾರ್ಮಿಕ ಆಯುಕ್ತ ವೆಂಕಟೇಶ್ ಸಿಂಧಿ ಹಟ್ಟಿ, ಕಾರ್ಮಿಕ ಇಲಾಖೆಯ ಇತರೆ ಅಧಿಕಾರಿಗಳು, ಕಟ್ಟಡ ನಿರ್ಮಾಣ ‌ಗುತ್ತಿಗೆದಾರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!