Sunday, June 26, 2022

Latest Posts

“ಕಾರ್ಯಕರ್ತರೇ ಜೀವಾಳ” ಎನ್ನುವ ಸಿದ್ಧಾಂತದ ಮೂಲಕ ಬಿಜೆಪಿ ಬೆಳೆದು ನಿಂತಿದೆ: ಎಸ್. ವಿ. ಸಂಕನೂರು

ಹೊಸ ದಿಗಂತ ವರದಿ ಅಂಕೋಲಾ:

ಬಿಜೆಪಿ ತನ್ನ ಮಹತ್ವದ ಸಿದ್ಧಾಂತವಾದ ದೇಶ ಮುಖ್ಯ ಮತ್ತು ಕಾರ್ಯಕರ್ತರೇ ಜೀವಾಳ ಎನ್ನುವ ಮೂಲಕ ವಿಭಿನ್ನವಾಗಿ ಬೆಳೆದು ನಿಂತಿದೆ ಎಂದು ವಿ. ಪ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.

ಅವರು ಶನಿವಾರ ಬಿಜೆಪಿ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯಲ್ಲಿ ಕುಟುಂಬ‌ರಾಜಕಾರಣಕ್ಕೆ ಬೆಲೆ ಇಲ್ಲ.ವ್ಯಕ್ತಿ ಪೂಜೆ ಇಲ್ಲ. ಕಾರ್ಯಕರ್ತರೇ ಜೀವಾಳ.ಯಾವುದೇ ನಿರ್ಧಾರ ಕಾರ್ಯಕರ್ತರ ಮಧ್ಯದಿಂದ ಹೊರ ಬರುತ್ತದೆಯೇ ವಿನ: ದೆಹಲಿಯಿಂದ ಅಲ್ಲ. ಕಾರ್ಯಕರ್ತರನ್ನು ನಾಯಕರನ್ನಾಗಿ ರೂಪಿಸುವ ಏಕೈಕ ಪಕ್ಷ ನಮ್ಮದು ಎಂದರು.

ಕಾರ್ಯಕರ್ತರು ಪಕ್ಷದ ಸಿದ್ದಾಂತ ಅಳವಡಿಸಿಕೊಂಡು ಜನಸಾಮಾನ್ಯರ ಮಧ್ಯೆ ಪ್ರಬಲ ಸಂಘಟನೆ ರೂಪಿಸಲು ಕೈ ಜೋಡಿಸಬೇಕು. ಸಾಮಾನ್ಯ ಕಾರ್ಯಕರ್ತರಾಗಿದ್ದ ಮೋದಿ ಜನಪ್ರಿಯ ಪ್ರಧಾನಿಯಾಗಿ, ಈಗ ಜಗಮೆಚ್ಚಿದ ನಾಯಕರಾಗಿ ಹೊರಹೊಮ್ಮಿದ್ದಾರೆ. ಪ್ರತಿ ಕಾರ್ಯಕರ್ತನೂ ಇಂತಹ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ರಾಘವೇಂದ್ರ ಭಟ್ ಸ್ವಾಗತಿಸಿದರು. ಬಿಜೆಪಿ ಅಧ್ಯಕ್ಷ ಸಂಜಯ ನಾಯ್ಕ, ಪ್ರಮುಖರಾದ ಭಾಸ್ಕರ ನಾರ್ವೇಕರ್, ಜಗದೀಶ ನಾಯಕ, ಪ್ರಶಾಂತ ನಾಯಕ, ನಿತ್ಯಾನಂದ ಗಾಂವಕರ್, ರಾಜೇಶ್ವರಿ ಕೇಣಿಕರ್, ರಾಜೇಂದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss