ಹೊಸ ದಿಗಂತ ವರದಿ, ಕೊಪ್ಪಳ:
ರಾಜ್ಯದ ಅಂಗನವಾಡಿ, ಕಾರ್ಯಕರ್ತೆಯರಿಗೆ, ಸಿಡಿಪಿಓಗಳ ಡಾಟಾ ನೊಂದಣಿ ಕೆಲಸದ ಅನುಕೂಲಕ್ಕಾಗಿ ರಾಜ್ಯಾದಂತ 72 ಸಾವಿರ ಸ್ಮಾರ್ಟ್ ಫೋನ್ ವಿತರಣೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು, ಹೇಳಿದರು.
ಜಿಲ್ಲೆಯ ಕಾರಟಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ಬರವಣಿಗೆಯ ಮೂಲಕ ಡಾಟಾಗಳನ್ನು ನೀಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು, ಸಿಡಿಪಿಓಗಳು ಮತ್ತು ಕೋಆಡಿನೆಟರ್ಗಳು ಇನ್ನ ಮೆಲೆ ಮೊಬೈಲ್ ಮೂಲಕ ಅಧಿಕಾರಿಗಳಿಗೆ ಡಾಟಾ ನೊಂದಣಿ ಮಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಸ್ಮಾರ್ಟ್ ಫೋನ್ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಒಂದು ಅಪ್ಲಿಕೇಷನ್ ಇರುತ್ತದೆ. ಇನ್ನ ಮೇಲೆ ಮೋಬೈಲ್ ಮೂಲಕ ಮೇಲಿನ ಅಧಿಕಾರಿಗಳಿಗೆ ಡಾಟಾಗಳನ್ನು ನೀಡಲು ಅನುಕೂಲಕ್ಕಾಗಿ 75 ಸಾವಿರ ಫೋನ್ಗಳನ್ನು ನೀಡಲಾಗುತ್ತಿದೆ ಎಂದರು.
ಗರ್ಭಣಿಯರ ರಕ್ತ ಹಿನತೆ ತಡೆಯುವ ಉದ್ದೇಶದಿಂದ ಗರ್ಭಣಿಸ್ತ್ರೀಯರು ಯಾವರೀತಿ ಆಹಾರ ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕೇಂದ್ರದ ಮೋದಿಜೀಯವರು ಪೊಷಣಾ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನ ಮೂಲಕ ಗರ್ಭಸ್ತ್ರೀಯರಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮುದಾಯವರ ಒಗ್ಗಟ್ಟಿನಿಂದ ಗರ್ಭಸ್ತ್ರೀಯರಿಗೆ ಸೀಮಂತೆ ಕಾರ್ಯಕ್ರಮ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗೂ ಮಕ್ಕಳ ಅಪೌಷ್ಠಿಕತೆ ನಿವಾರಣೆ ಮಾಡುವ ಉದ್ದೇಶದಿಂದ ಹುಟ್ಟಿದ ಮಕ್ಕಳಿಗೆ 6 ತಿಂಗಳ ನಂತರ ಯಾವ ರೀತಿ ಆರೋಗ್ಯಕರ ಆಹಾರ ನೀಡಬೇಕು ಎಂಬ ಸಲಹೆ ನೀಡಲು ಅನ್ನಪ್ರಾಶಣ ಯೋಜನೆಯನ್ನು ರಾಜ್ಯದ್ಯಂತ ಜಾರಿಗೆ ತಂದು ಚಾಲನೆ ನೀಡಲಾಗಿದೆ ಈ ಯೋಜನೆಯುವ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೇಗೆ ಉತ್ತರಿಸಿದ ಅವರು ಯಾವುದೇ ಕಾರಣಕ್ಕೂ ಬದಲಾವಣೆ ವಿಚಾರವೇ ಇಲ್ಲ. ಕೊವಿಡ್ ಹಾಗೂ ನೆರೆಯ ಸಂಕಷ್ಟದಲ್ಲೂ ಕೂಡ ಉತ್ತಮ ಕೆಲಸ ಮಾಡುತ್ತಾ ರಾಜ್ಯದ ಅಭಿವೃದ್ಧಿಯ ಕಡೆ ಸಾಗಿದ್ದಾರೆ. ಇನ್ನೂ ಎರಡೂವರೆ ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು.