Sunday, June 26, 2022

Latest Posts

ಕಾಲಿಗೆ ಹುಳಬಿದ್ದಿದ್ದ ಅನಾಥನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಕಾರ್ಯಕರ್ತರು

ಕೋಲಾರ:  ಕಾಲಿನ ಗಾಯಗಳಿಗೆ ಹುಳು ಬಿದ್ದು, ಕಳೆದ ಆರು ದಿನಗಳಿಂದ ನರಳಾಡುತ್ತಿದ್ದ ಅನಾಥ ವ್ಯಕ್ತಿಯೊಬ್ಬರನ್ನು ಛಾಯಾಗ್ರಾಹಕ ಮದನ್, ಗಾಂಧಿನಗರದ ಆನಂದ್, ವಿಶ್ವ, ಬಜರಂಗದಳದ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಎನ್‌ಎನ್‌ಆರ್ ಆಸ್ಪತ್ರೆ ವೃತ್ತದಲ್ಲಿ ವ್ಯಕ್ತಿಯೊಬ್ಬರ ಕಾಲಿಗೆ ಹುಳ ಬಿದ್ದಿದ್ದು, ಜೀವಂತ ವ್ಯಕ್ತಿಯ ಕಾಲನ್ನು ಹುಳುಗಳು ತಿನ್ನುತ್ತಿದ್ದು, ಆತನ ಬಳಿ ದುರ್ವಾಸನೆ ಇದ್ದುದರಿಂದ ಯಾರೂ ಹತ್ತಿರ ಸುಳಿಯುತ್ತಿರಲಿಲ್ಲ.
ಅಲ್ಲಿನ ಸಾರ್ವಜನಿಕರು ಒಂದಷ್ಟು ಊಟ,ನೀರು ನೀಡಿ ಸುಮ್ಮನಾಗುತ್ತಿದ್ದರು, ಕಳೆದ ರಾತ್ರಿ ಮಳೆಯಲ್ಲಿ ನೆನೆಯುತ್ತಿದ್ದ ನರಳುತ್ತಿದ್ದ ಈ ವ್ಯಕ್ತಿಯನ್ನು ಮದನ್ ಮತ್ತಿತರರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss