Wednesday, June 29, 2022

Latest Posts

ಕಾಲಿನ‌ ಮೂಲಕ ಮತದಾನ ಮಾಡಿ, ಇತರರಿಗೆ‌ ಮಾದರಿಯಾದ ಬಳ್ಳಾರಿಯ ಲಕ್ಷ್ಮೀ

 ಹೊಸ ದಿಗಂತ ವರದಿ, ಬಳ್ಳಾರಿ:

ದೇಹದ‌ ಎಲ್ಲ ಅಂಗಾoಗಳು ಸರಿ‌ ಇದ್ದರೂ‌ ಮತದಾನ ಮಾಡಲು ಬಹುತೇಕ ಜನರು ಹಿಂದು ಮುಂದು ನೋಡುವುದು ಸಾಮಾನ್ಯವಾಗಿದೆ. ಆದರೇ, ಎರಡೂ ಕೈಗಳಿಲ್ಲದಿದ್ದರೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಕಾಲಿನ‌ ಮೂಲಕ ಮತದಾನ ಮಾಡಿ ಯುವತಿಯೋಬ್ಬಳು ಗಮನಸೆಳೆದಿದ್ದಾರೆ.
ಎರಡನೇ ಹಂತದ ಮತದಾನ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಘಟನೆ ಹೊರತು ಪಡಿಸಿ ಬೆಳಿಗ್ಗೆಯಿಂದ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯ ಕೂಡ್ಲಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ಗುಂಟಮಣಗು ಮತಗಟ್ಟೆ ಕೇಂದ್ರದಲ್ಲಿ‌ ಎರಡೂ ಕೈಗಳಿಲ್ಲದಿದ್ದರೂ ಲಕ್ಷ್ಮೀ ಎನ್ನುವ ಯುವತಿ ಕಾಲಿನ ಮೂಲಕ ‌ಮತದಾನ ಮಾಡಿ ಇತರರಿಗೆ‌ ಮಾದರಿಯಾಗಿದ್ದಾರೆ. ಮತದಾನದ ಕುರಿತು ಸರ್ಕಾರ ಸಾಕಷ್ಟು ಜಾಗೃತಿ ‌ಮೂಡಿಸುತ್ತಿದ್ದರೂ ತಮ್ಮ ಹಕ್ಕನ್ನು ಚಲಾಯಿಸಲು‌ ಮುಂದೆ ಬರುವುದು ಕಡಿಮೆಯಾಗಿದೆ. ಹಳ್ಳಿಯ ಅಖಾಡ‌ ಗ್ರಾ.ಪಂ.ಚುನಾವಣೆ ಹಿನ್ನೆಲೆ ಉಳಿದ‌ ಚುನಾವಣೆ ಗಳಿಗಿಂತ ಶೇಕಡಾ‌ವಾರು ಹೆಚ್ಚಿದೆ. ಈ ಹಿಂದೆ ಲೋಕಸಭೆ‌ ಚುನಾವಣೆಯಲ್ಲಿ ಮತದಾನ ಜಾಗೃತಿ ಮುಡಿಸುವ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ ಲಕ್ಷ್ಮೀ ಎನ್ನುವವರು ಶನಿವಾರ ಮತದಾನ ಮಾಡಿ ತಮ್ಮ ಕರ್ತವ್ಯ‌ ಮೆರೆದಿದ್ದಾರೆ. ಹುಟ್ಟು ಎರಡೂ ಕೈಗಳಿಲ್ಲದ ಲಕ್ಷ್ಮೀ ಎನ್ನುವವರು ಕಾಲಿನ ಮೂಲಕ ಮತದಾನ ಮಾಡಿದ ಹಿನ್ನೆಲೆ ಸಂಬಂಧಿಸಿದ ಚುನಾವಣೆ ಸಿಬ್ಬಂದಿಗಳು ಅವರ ಕಾಲಿನ ಎರಳಿಗೆ ಶಾಹಿ ಹಾಕಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss