ಹೊಸದಿಗಂತ ವರದಿ, ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕಕ್ಕೆಹೊಳೆ ಮುಖ್ಯ ನಾಲೆಯ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಆ ಭಾಗದ ರೈತರು ಆಗ್ರಹಿಸಿದ್ದಾರೆ.
ಕಕ್ಕೆಹೊಳೆ ಅಣೆಕಟ್ಟೆಯ ನೀರು ಸರಾಗವಾಗಿ ನಾಲೆಯಲ್ಲಿ ಹರಿಯುವಂತೆ ಮಾಡುವ ದಿಸೆಯಲ್ಲಿ ಸಣ್ಣ ನೀರಾವರಿ ಇಲಾಖೆಯು ಮುಖ್ಯ ನಾಲೆ ದುರಸ್ತಿಗೆ ಮುಂದಾಗಿದೆ. ಆದರೆ ವಿದ್ಯುತ್ ಕಂಬಗಳು ಕಾಲುವೆ ಮಧ್ಯೆ ಇರುವುದರಿಂದ ಕಾಲುವೆಯ ದುರಸ್ತಿಗೆ ತೊಂದರೆಯಾಗುತ್ತಿದೆ. ಕುಶಾಲನಗರ ವಲಯದ ವಿದ್ಯುತ್ ಇಲಾಖೆಯವರು ಸ್ಧಳ ಪರಿಶೀಲಿಸಿ ವಿದ್ಯುತ್ ಕಂಬಗಳನ್ನು ತೆರವು ಮಾಡುವಂತಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.