Sunday, August 14, 2022

Latest Posts

ಕಾಲು ಕಿತ್ತುಕೊಂಡ ವಿಧಿಗೆ ತನ್ನ ಕನಸು ನನಸು ಮಾಡಿ ತಿರುಗೇಟು ಕೊಟ್ಟ ಪೋರ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಛಲವೊಂದಿದ್ದರೆ ವಿಧಿಗೆ ಅದರ ಮುಂದೆ ತಲೆಬಾಗಲೇ ಬೇಕು ಎನ್ನುವುದಕ್ಕೆ ಉದಾಹರಣೆ ಈ ಬಾಲಕ.
ಮಣಿಪುರದಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಕುನಾಲ್ ಶ್ರೇಷ್ಠ ಎಂಬ ಈ ಪೋರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸುದ್ದಿಯಾಗುತ್ತಿದ್ದಾನೆ.

ವಿಧಿಯ ಆಟಕ್ಕೆ ತನ್ನ ಒಂದು ಕಾಲು ಕಳೆದುಕೊಂಡಿದ್ದರೂ ಛಲ ಬಿಡದ ಈ ಬಾಲಕ ತನ್ನ ಇಷ್ಟದ ಫುಟ್ಬಾಲ್ ಆಟವನ್ನು ಕ್ರಚ್‌ನ ಸಹಾಯದಿಂದ ಆಡುತ್ತಿರುವ ವಿಡಿಯೋ ಎಂಥವರನ್ನೂ ದಂಗಾಗಿಸುತ್ತದೆ.
ನನಗೆ ಫುಟ್ಬಾಲ್ ಆಡುವುದು ಬಹಳ ಇಷ್ಟ. ಆರಂಭದಲ್ಲಿ  ಬ್ಯಾಲೆನ್ಸಿಂಗ್ ಕಷ್ಟವಾಗುತ್ತಿತ್ತು. ಆದರೆ ಈಗ ನನಗೆ ವಿಶ್ವಾಸ ಹೆಚ್ಚಿದೆ. ನನ್ನ ಸ್ನೇಹಿತರು ನನಗೆ ಸಾಥ್ ನೀಡುತ್ತಿದ್ದಾರೆ. ಗೋಲ್ ಪಡೆಯುವುದು ನನ್ನ ಕನಸು, ಅದನ್ನು ಶೀಘ್ರದಲ್ಲಿಯೇ ಈಡೇರಿಸಿಕೊಳ್ಳುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ ಕುನಾಲ್!

ಒಂದೇ ಕಾಲಿದ್ದರೂ ಕುನಾಲ್ ತನ್ನ ತಾಯಿಗೆ ಮನೆಗೆಲಸಗಳಲ್ಲಿ ಸಹಾಯ ಮಾಡುತ್ತಿದ್ದಾನೆ. ಐಸ್‌ಕ್ರೀಂಗಳು, ಪಾನಿಪುರಿ ಮಾರಿಕೊಂಡು ಜೀವನ ಸಾಗಿಸುವ ತನ್ನ ತಾಯಿಗೆ ಅವರ ಉದ್ಯೋಗದಲ್ಲಿ ಸಾಥ್ ನೀಡುತ್ತಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss