Friday, July 1, 2022

Latest Posts

ಕಾಲೇಜುಗಳ ಪುನಾರಂಭಕ್ಕೆ ಎಲ್ಲಾ ಸಿದ್ಧತೆ ನಡೆದಿದೆ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್

ಹೊಸದಿಗಂತ ವರದಿ ಮೈಸೂರು:

ಕಾಲೇಜುಗಳ ಪುನಾರರಂಭಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಕಾಲೇಜು ಆರಂಭ ಕುರಿತಂತೆ ಮೈಸೂರು ವಿವಿಯಿಂದ ಎಸ್‌ಓಪಿ ಪ್ರಕಟ ಮಾಡಿದ್ದು, ಈ ಸಂಬAಧ ಮೂರು ಸುತ್ತಿನ ಸಭೆ ನಡೆಸಿದ್ದೇವೆ. ಪ್ರಾಂಶುಪಾಲರಿಗೆ ಮಾರ್ಗಸೂಚಿ ಬಗ್ಗೆ ವಿವರಣೆ ನೀಡಿದ್ದೇವೆ. ಮೈಸೂರು ವಿವಿಯಲ್ಲಿ ೧.೩೦ ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಅಂತಿಮ ತರಗತಿ ವಿದ್ಯಾರ್ಥಿಗಳು ೩೫ ಸಾವಿರಕ್ಕು ಹೆಚ್ಚು ಇದ್ದಾರೆ ಎಂದರು.

ಕಾಲೇಜಿಗೆ ಬರುವ ಎಲ್ಲರಿಗೂ ಕೊರೋನಾ ಟೆಸ್ಟ್ ಕಡ್ಡಾಯ. ಪೋಷಕರಿಂದ ಅನುಮತಿ ಪತ್ರ ತರಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡು ವಿಭಾಗ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು. ಕಾಲೇಜಿನಲ್ಲಿ ತರಗತಿಗಳು ಮಾತ್ರ ಇರಲಿವೆ. ಕ್ಯಾಂಟಿನ್ ಅಥವಾ ಲೈಬ್ರರಿ ಇರೋದಿಲ್ಲ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss