Thursday, August 11, 2022

Latest Posts

ಕಾಲೇಜು ಬೋಧಕರಿಗೆ ನ.11ರವರೆಗೆ ‘ವರ್ಕ್‌ ಫ್ರಮ್ ಹೋಂʼಗೆ ರಾಜ್ಯ ಸರ್ಕಾರ ಸೂಚನೆ

ಮಂಗಳೂರು: ಇಂದಿನಿಂದ ನವೆಂಬರ್‌ 11ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಕಾಲೇಜು ಬೋಧಕರಿಗೆ ರಾಜ್ಯ ಸರ್ಕಾರ ಮಹತ್ವದ ಸೂಚನೆಯನ್ನು ನೀಡಿದೆ.
ಈ ಸಂಬಂಧ ಸಚಿವಾಲಯ ಆದೇಶ ಹೊರಡಿಸಿದ್ದು, 2020/21ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭಕ್ಕೆ ಆಗತ್ಯವಿರುವ ಪೂರ್ವ ಸಿದ್ಧತೆಗಳಾಗ ಡಿಜಿಟಲ್‌ ಲರ್ನಿಂಗ್‌, ಅನ್ಲೈನ್‌/ಅಫ್ಲೈನ್‌ ಟೀಚಿಂಗ್‌, ಸ್ಟಡಿ ಮೆಟಿರಿಯಲ್‌ ಪ್ರಿಪರೇಷನ್‌, ಮುಂತಾದವುಗಳ ಬಗ್ಗೆ ತಯಾರಿ ಮಾಡಿಕೊಳ್ಳಲು, ಇಲಾಖಾ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುಧಾನಿತ ಕಾಲೇಜುಗಳ/ ಎಲ್ಲಾ ವಿಶ್ವ ವಿದ್ಯಾಲಯಗಳ ಭೋದಕರಿಗೆ ದಿನಾಂಕ 4.11.2020 ರಿಂದ ದಿನಾಂಕ 11.11.2020ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಮೋದನೆ ನೀಡಿದೆ.
ಇನ್ನು ಪ್ರಾಂಶುಪಾಲರು ಸೂಚಿಸಿದ ಭೋಧಕರುಗಳು ಕಾಲೇಜಗಳಲ್ಲಿನ ತುರ್ತು ಕೆಲಸಗಳನ್ನ ನಿರ್ವಹಿಸಲು ಪರೀಕ್ಷಾ ಕಾರ್ಯಗಳಿದ್ದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆಯೂ ಸೂಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss