ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಳಸಂತೆಯಲ್ಲಿ ರೆಮಿಡಿಸಿವರ್ ಚುಚ್ಚುಮದ್ದುಗಳ ಮಾರಾಟ: ಮೂವರು ಆರೋಪಿಗಳ ಬಂಧನ

ಹೊಸದಿಗಂತ ವರದಿ, ತುಮಕೂರು:

ಕೊವಿಡ್ ರೋಗಿಗಳಿಗೆ ಸಂಜೀವಿನಿಯಾಗಿರುವ ರೆಮಿಡಿಸಿವರ್ ಚುಚ್ಚುಮದ್ದುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ತುಮಕೂರಿನ ಸಿ.ಎ.ಎನ್. ಪೊಲೀಸರು ಯಶಸ್ವಿಯಾಗಿದ್ದಾರೆ.

ಖಾಸಗಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ತುಮಕೂರು  ಗೋಕುಲ ನಿವಾಸಿ ಸೈಯದ್ ಹರ್ಷದ್ (23), CT ಎಕ್ಸ್ ರೇ ವಿಭಾಗದಲ್ಲಿ ಕೆಲಸ  ಮಾಡುತ್ತಿದ್ದ ಗುಂಚಿ ವೃತ್ತದ ರಖೀಭ್ (30) ಮತ್ತು ಹೊಂಬಯ್ಯನ ಪಾಳ್ಯದ  ವಿನಾಯಕ ನಗರದಲ್ಲಿನ ಸೂರ್ಯ ಆಸ್ಪತ್ರೆಯ ಓಟಿ ಟೆಕ್ನೀಸಿಯನ್ ರಂಗನಾಥ(30) ಬಂಧಿತ ಆರೋಪಿಗಳು

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಾದ ಡಾ.ವಂಸಿಕೃಷ್ಣ, ತುಮಕೂರು ನಗರದಲ್ಲಿ ರೆಮಿಡಿಸಿವರ್ ಚುಚ್ಚುಮದ್ದುಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ಭಾನುವಾರ ಸಿಎಎನ್ ಇನ್ಸ್ಫೆಕ್ಟರ್ ಎಂ.ವಿ.ಶೇಷಾದ್ರಿಯವರ ನೇತೃತ್ವದಲ್ಲಿ ಜಿಲ್ಲಾಪೊಲೀಸ್ ಮುಖ್ಯಾಧಿಕಾರಿಗಳ ಎರಡು ಖಾಸಗಿ ಆಸ್ಪತ್ರೆಗಳ ಮೂವರು ನೌಕರರನ್ನು ಬಂಧಿಸಿದ್ದಾರೆ.

ಗುಂಚಿವೃತ್ತದಲ್ಲಿ ಬಂಧಿಸಿರುವ ಪೊಲೀಸರು ಅವರಿಂದ 100ಎಂಜಿ ಸಾಮರ್ಥ್ಯದ ಮೂರು ರೆಮಿಡಿಸಿವರ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿ ಚುಚ್ಚುಮದ್ದಿನ ಬೆಲೆ 4700ರೂಗಳಿದ್ದು. ಈ ಕಳ್ಳರು  ಪ್ರತಿಯೊಂದು  ಚುಚ್ಚುಮದ್ದನ್ನು 17 ಸಾವಿರ ರೂಗಳಂತೆ ಮಾರಾಟಮಾಡುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.

ಡ್ರಗ್ ಕಂಟ್ರೋಲರ್ ಮಮತಾ, ನಗರ ಠಾಣೆ ಪಿಎಸ್ ಐ ಮಂಜುನಾಥ್, ಸಿಎಎನ್ ಠಾಣೆಯ ಸಿಬ್ಬಂದಿ ಅಯೂಬ್ ಖಾನ್. ನಾಗರಾಜು, ರವಿರೆಡ್ಡಿ ಇವರುಗಳ ತಂಡ ಈ ಕಳ್ಳನನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss