ಚಾಮರಾಜನಗರ: ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಹಾಡುಹಗಲೇ ಕಳ್ಳತನವಾಗಿರುವ ಘಟನೆ ನಡೆದಿದೆ.
ಕಾಳಿಕಾಂಬ ದೇವಿಯ ವಿಗ್ರಹ ದಲ್ಲಿದ್ದ ಹತ್ತು ಗ್ರಾಂ ಮೌಲ್ಯದ 2 ಚಿನ್ನದ ತಾಳಿ, ಚಿನ್ನದ ಗುಂಡು ಕಳ್ಳತನವಾಗಿದೆ. ದೇವರ ದರ್ಶನಕ್ಕೆ ಬಂದ ವ್ಯಕ್ತಿಯ ಕೈ ಚಳಕ ತೋರಿಸಿದ್ದಾನೆ. ಪೂಜಾರಿ ಮಂಗಳಾರತಿ ನೀಡುವುದಿಲ್ಲ ಎಂದು ಅಡಿಗೆ ಕೋಣೆಗೆ ಹೋಗುತ್ತಿದ್ದಂತೆ ಸಿಸಿಟಿವಿ ಆಫ್ ಮಾಡಿ ದೇವಿಯ ವಿಗ್ರಹದಲ್ಲಿ ಚಿನ್ನದ ತಾಳಿ ಕದ್ದು ಪರಾರಿಯಾಗಿದ್ದಾನೆ.
ನಗರದ ಕೈಂಬ್ರಾಂಚ್ ಪೋಲಿಸರಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಪೊಲೀಸರು ಸಿ.ಸಿ.ಟಿ.ವಿ ಪೋಟೇಜ್ ಪಡೆದು ತನಿಖೆ ತೀವ್ರ ಗೊಳಿಸಿದ್ದಾರೆ.