ಶ್ರೀರಂಗಪಟ್ಟಣ : ಪಟ್ಟಣದ ವಿವಿದೆಡೆಗಳಲ್ಲಿನ ಕಾವೇರಿ ನದಿ ತೀರದಲ್ಲಿ ಪಿತೃಪಕ್ಷದ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯದ ಸಾವಿರರು ನಾಗರೀಕರು ತಮ್ಮ ಪೂರ್ವಿಕರು ಹಾಗೂ ಅಗಲಿದ ಕುಟುಂಬ ಸದಸ್ಯರಿಗೆ ತರ್ಪಣ ಬಿಟ್ಟು ಹಾಗೂ ಪಿಂಡಪ್ರದಾನ ನೆರವೇರಿಸಿದರು.
ಪಟ್ಟಣದ ಸ್ನಾನಘಟ್ಟ, ಪಶ್ಚಿಮವಾಹಿನಿ, ದೊಡ್ಡಗೋಸಾಯಿ ಘಾಟ್ ಸೇರಿದಂತೆ ಕಾವೇರಿ ನದಿ ತೀರ ಪ್ರದೇಶಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ನಾಗರೀಕರು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಅರ್ಚಕರೊಂದಿಗೆ ಪೂಜೆ ವಿವಿಧ ನೆರವೇರಿಸಿ ಪೂರ್ವಿಕರಿಗೆ ಪಿಂಡಪ್ರಧಾನ ಮಾಡಿದರು.
ಪ್ರತೀ ವರ್ಷವೂ ಈ ಮಹಾಲಯ ಅಮವಾಸ್ಯೆಯಂದು ಅಗಲಿದ ಪೂರ್ವಿಕರ ಆತ್ಮಕ್ಕೆ ಶಾಂತಿ ಕೋರಿ ಪಿಂಡಪ್ರಧಾನ ನೆರವೇರಿಸುವ ಜೊತೆಗೆ ದೇವ ಋಣ, ಋಷಿ ಋಣ ಹಾಗೂ ಪಿತೃ ಋಣಗಳನ್ನು ತೀರಿಸಲೇಬೇಕೆಂಬ ನಂಬಿಕೆಯಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ನದಿ ತೀರಗಳಲ್ಲಿ ಪಂಡ ಪ್ರಧಾನ ನೆರವೇರಿಸಿ, ಮನೆ ಮನೆಗಳಲ್ಲಿ ಬಗೆ ಬಗೆಯ ಅಡುಗೆ ಆಹಾರ ಪದಾರ್ಥಗಳನ್ನು ಹೆಡೆ ಇಟ್ಟು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ವಾಹನ ದಟ್ಟಣೆ: ಪಿತೃಪಕ್ಷದ ಹಿನ್ನಲೆಯಲ್ಲಿ ಪಟ್ಟಣದ ಕಾವೇರಿ ನದಿಯಲ್ಲಿ ಪಿಂಡಪ್ರದಾನ ಮತ್ತು ತರ್ಪಣಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿದ್ದ ಕಾರಣ ಸ್ಥಳಿಯ ಜನರು, ಬಸ್ ಪ್ರಯಾಣಿಕರು ಮತ್ತು ಪ್ರವಾಸಿಗರು ಪರದಾಡುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.